ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿ ಹಾಗೂ ಜೇಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಗದಗ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗದುಗಿನ ರೋಟರಿ ಕ್ಲಬ್ ವೆಲ್‌ಫೇರ್ ಸೊಸೈಟಿಯಲ್ಲಿ ನೇತ್ರ ತಪಾಸಣೆ ಹಾಗೂ ಕಣ್ಣಿನಲ್ಲಿ ಮಸೂರ ಅಳವಡಿಸುವ ಶಸ್ತ್ರಚಿಕಿತ್ಸಾ ಶಿಬಿರ ಜರುಗಿತು.
205ನೇ ಉಚಿತ ಶಸ್ತ್ರಚಿಕಿತ್ಸಾ ಶಿಬಿರದ ಪ್ರಾಯೋಜಕತ್ವವನ್ನು ಗದಗ ಜೇಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಸಂಘಟನೆಯು ವಹಿಸಿಕೊಂಡಿತ್ತು. ನಿರಂತರವಾಗಿ ನಡೆಯುತ್ತಿರುವ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಕುರಿತಾಗಿ ರೋಟರಿ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಶ್ರೀಧರ ಸುಲ್ತಾನಪೂರ ಮಾತನಾಡಿ, ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿದ್ದು, ಕಣ್ಣಿನ ರಕ್ಷಣೆಗೆ ನಮ್ಮೆಲ್ಲರ ಮೊದಲ ಆದ್ಯತೆ ಇರಲಿ. ಗದಗ-ಬೆಟಗೇರಿ ರೋಟರಿ ಕ್ಲಬ್ ನಿರಂತರವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ನಡೆಸುತ್ತಿದ್ದು, ಇದು ಬಡ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿದೆ ಎಂದರು.
ರೋಟರಿ ಕ್ಲಬ್‌ನ ಕಾರ್ಯದರ್ಶಿ ಸುರೇಶ ಕುಂಬಾರ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ನಡೆಸುತ್ತಿರುವ ಕಣ್ಣಿನ ಚಿಕಿತ್ಸೆ ಪಡೆದ ಸಾವಿರಾರು ಫಲಾನುಭವಿಗಳು ಇಂದು ಆರೋಗ್ಯದಿಂದ ಇದ್ದು, ಉತ್ತಮ ದೃಷ್ಟಿ ಹೊಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಶ್ವಿನಿ ಮಾದಗುಂಡಿ, ಶಶಿಕಲಾ ಮಾಲಿಪಾಟೀಲ, ಮಾಧುರಿ ಮಾಳೆಕೊಪ್ಪ, ಅನುರಾಧಾ ಅಮಾತ್ಯೆಗೌಡರ, ಚಂದ್ರಕಲಾ ಸ್ಥಾವರಮಠ, ಸುಶ್ಮೀತಾ ವೇರ್ಣೆಕರ, ನಿರ್ಮಲಾ ಪಾಟೀಲ, ರೇಖಾ ರೊಟ್ಟಿ, ಮಧು ಕರಬಿಷ್ಟಿ, ಸುಗ್ಗಲಾ ಯಳಮಲಿ, ಶ್ರೀದೇವಿ ಮಹೇಂದ್ರಕರ, ಬಾಲಕೃಷ್ಣ ಕಾಮತ, ಡಾ. ಪ್ರದೀಪ ಉಗಲಾಟ, ಡಾ. ವಿನಯ ಟೀಕಾರೆ ಮುಂತಾದವರಿದ್ದರು.
ಶಿವಾಚಾರ್ಯ ಹೊಸಳ್ಳಿಮಠ ಸ್ವಾಗತಿಸಿದರು. ಡಾ. ಆರ್.ಜಿ. ಉಪ್ಪಿನ ನಿರೂಪಿಸಿದರು. ಚಂದ್ರಶೇಖರ ಹುಣಶೀಕಟ್ಟಿ ವಂದಿಸಿದರು. ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ರುದ್ರೇಶ, ನೇತ್ರಾ, ಜ್ಯೋತಿ ದೊಡ್ಡಮನಿ, ದೀಪಾ, ಆನಂದ ಶಿಂಗ್ರಿ, ಸಹಾಯಕರಾಗಿ ಸೇವೆ ಸಲ್ಲಿಸಿದರು.
ಜೇಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಕಣ್ಣು ನಮ್ಮ ದೇಹದ ಸೂಕ್ಷ್ಮವಾದ, ಅತ್ಯಂತ ಪ್ರಮುಖವಾದ ಭಾಗವಾಗಿದೆ. ಇವುಗಳ ಆರೈಕೆ ಅತೀ ಮುಖ್ಯವಾಗಿದೆ. ವಿಟಾಮಿನ್ ಸಿ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಕಣ್ಣಿನ ಪೊರೆ ಬರುವದನ್ನು ತಡೆಗಟ್ಟಬಹುದು. ಮುಖ್ಯವಾಗಿ ತಜ್ಞ ವೈದ್ಯರ ಭೇಟಿ, ಸೂಕ್ತ ಚಿಕಿತ್ಸೆ ಮೂಲಕ ಕಣ್ಣಿನ ರಕ್ಷಣೆ ಮಾಡಿಕೊಳ್ಳಬೇಕು ಎಂದರು.



