ವಿಜಯಸಾಕ್ಷಿ ಸುದ್ದಿ, ಗದಗ : ಯಾರೂ ಬರದಿರುವ ಗುಡ್ಡಗಾಡು ಜಾಗದಲ್ಲಿ ಓಂಕಾರಗಿರಿ ಓಂಕಾರೇಶ್ವರ ಮಠದ ಫಕ್ಕಿರೇಶ್ವರ ಶ್ರೀಗಳು ಭಕ್ತರು ಹರಿದು ಬರುವಂತೆ ಮಾಡಿರುವುದು ಸಾಮಾನ್ಯ ಕೆಲಸವಲ್ಲ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಶ್ರೀಮಠದ ಪೂಜ್ಯಶ್ರೀ ಡಾ. ಅಭಿನವ ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
ಅವರು ಇಲ್ಲಿನ ಆದಿತ್ಯ ನಗರದಲ್ಲಿರುವ ಓಂಕಾರೇಶ್ವರ ಶ್ರೀಮಠದಲ್ಲಿ ಶಿವರಾತ್ರಿ ದಶಮಾನೋತ್ಸವ ಹಾಗೂ ಪೂಜ್ಯಶ್ರೀ ಫಕ್ಕೀರೇಶ್ವರ ಶ್ರೀಗಳ ಷಷ್ಠ್ಯಬ್ದಿಪೂರ್ತಿ ಸಮಾರಂಭದ ಅಂಗವಾಗಿ 60 ಬಿಲ್ವಪತ್ರಿ ಸಸಿಗಳ ವಿತರಣೆ, 60 ಸಾಧಕರಿಗೆ, ಸದ್ಬಕ್ತರಿಗೆ ಸನ್ಮಾನ, `ಓಂಕಾರಶ್ರೀ’ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಏನೂ ಇಲ್ಲದೆ ಕೊಂಪೆಯಾಗಿದ್ದ ಈ ಗುಡ್ಡದ ಜಾಗದಲ್ಲಿ ಹಂಪೆಯನ್ನು ನಿರ್ಮಾಣ ಮಾಡಿ ಬರುವ ಭಕ್ತರಿಗೆ ಸದಾಕಾಲ ಶಾಸ್ತç, ಶಿವಾನುಭವ ಹಾಗೂ ಧರ್ಮಜಾಗೃತಿ ಮೂಡಿಸುತ್ತಿರುವ ಫಕ್ಕೀರೇಶ್ವರ ಶಿವಾಚಾರ್ಯರರ ಸಾಧನೆ ಅಸಾಮಾನ್ಯವಾಗಿದೆ. ಅನೇಕ ಯುವ ಯತಿಗಳಿಗೆ ಮಾರ್ಗದರ್ಶಕರಾಗುವ ಮೂಲಕ ನಾಡು ಕಂಡ ಅಪರೂಪದ ಸ್ವಾಮೀಜಿಗಳಾಗಿದ್ದಾರೆ ಎಂದು ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಲಿಂಗಯ್ಯಶಾಸ್ತಿಗಳು ಹಿರೇಮಠ ಸಿದ್ದಾಪೂರ ಅವರಿಗೆ `ಓಂಕಾರಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಉಪನ್ಯಾಸಕ ಅನಿಲ್ ವೈದ್ಯ ಬದುಕಿನಲ್ಲಿ ಹಾಸ್ಯದ ಕುರಿತು ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ನಾವು ನಗುವದನ್ನೇ ಮರೆತುಬಿಟ್ಟಿದ್ದೆವೆ. ದೊಡ್ಡ ದೊಡ್ಡ ನಗರದಲ್ಲಿ ನಗುವದಕ್ಕಾಗಿಯೇ ಹಣ ಕೊಡಬೇಕಾಗಿದೆ. ಹೆಚ್ಚು ನಗುವದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಸುತ್ತಮುತ್ತಲಿನ ಜನರೊಂದಿಗೆ ಬೆರೆತು ನಗುನಗುತಾ ಕಾಲ ಕಳೆಯಬೇಕೆಂದು ಹೇಳಿದರು.
ವೇದಿಕೆ ಮೇಲೆ ಹಿರೇವಡ್ಡಟ್ಟಿ ಹಿರೇಮಠದ ಪೂಜ್ಯಶ್ರೀ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕದಡಿ ನೀಲಮ್ಮ ತಾಯಿ ಶ್ರೀಮಠದ ಪೂಜ್ಯಶ್ರೀ ಮಹಾದೇವ ಸ್ವಾಮಿಗಳು, ಸಂಭಾಪೂರ ವೀರಮ್ಮತಾಯಿ ಆಶ್ರಮದ ಮಾತೋಶ್ರೀ ಅಭಿನವ ರುದ್ರಮ್ಮ ತಾಯಿ, ಕೊಡಗಾನೂರದ ಚಂದ್ರಶೇಖರ ಶರಣರು ಹಿರೇಮಠ, ಗದುಗಿನ ಅಡವೀಂದ್ರಸ್ವಾಮಿ ಮಠದ ಪೂಜ್ಯಶ್ರೀ ಮಹೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮಹಿಳಾ ರುದ್ರ ಬಳಗದ ತಾಯಂದಿರು ವೇದಘೋಷ ಮಾಡಿದರು. ಸಂಗೀತ ಬಳಗದಿಂದ ಪ್ರಾರ್ಥನೆ ಮಾಡಲಾಯಿತು. ಶಿಕ್ಷಕ ಬಿ.ಬಿ. ಹಾವಣಗಿ ಸ್ವಾಗತಿಸಿದರು. ಪತ್ರಕರ್ತ ಆನಂದಯ್ಯ ವೀರಕ್ತಮಠ ಶಿವರಾತ್ರಿ ಸಂದೇಶ ನುಡಿದರು.
ಚೇತನ ಕರಾಟೆ ಕ್ಲಬ್ ಬಳಗದವರಿಂದ ಕರಾಟೆ ಪ್ರದರ್ಶನ, ಧರಣಿ ಕದಡಿ ಅವರಿಂದ ಬ್ರೆöÊಟರ್ ಮೈಂಡ್ ಪ್ರದರ್ಶನ ಜರುಗಿತು. ಸಾಹಿತಿ ಕೆ.ಎ. ಬಳಿಗೇರ ಕಾರ್ಯಕ್ರಮ ನಿರೂಪಿಸಿದರು. ಸೊರಟೂರಿನ ಹಳಿಕೆಮ್ಮದೇವಿ ರಾತ್ರಿಶಾಲೆಯ ಬಾಲಕಿಯರಿಂದ ಕೋಲಾಟ ನೃತ್ಯ ಹಾಗೂ ಕನ್ನಡ ದೀಪೋತ್ಸವ ಕಾರ್ಯಕ್ರಮ ಜರುಗಿತು. ಶಿವಲಿಂಗಯ್ಯಶಾಸ್ತಿಗಳು ಹಿರೇಮಠ ಸಿದ್ದಾಪೂರ ಹಾಗೂ ಸೊರಟೂರಿನ ಬಸವರಾಜ ಶೆಲಿಯಪ್ಪನವರ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಭದ್ರಾಪೂರದ ಇಸ್ಲಾಂ ಸಮುದಾಯದ ದಾದಾಪೀರ ಕುಟುಂಬ, ದ್ರಾಕ್ಷಾಯಣಿ ಹೂಗಾರ ಕುಟುಂಬ, ಹೊಳೆಆಲೂರಿನ ಗೌರಿಮಠ ಕುಟುಂಬ, ಗುಜಮಾಗಡಿಯ ತಿಪ್ಪನಗೌಡ ಪಾಟೀಲ ಕುಟುಂಬ, ಗದುಗಿನ ಜಯಮ್ಮ ಕುಟುಂಬ, ಶರಣಯ್ಯ ಹಡಗಲಿಮಠ ಕುಟುಂಬ, ಪಾರ್ವತಿದೇವಿ ಕುಟುಂಬ, ಬಳ್ಳಾರಿಯ ಸಿದ್ದರಾಮಯ್ಯ ಮಠದ ಅವರ ಕುಟುಂಬದವರು ಪಕ್ಕೀರೇಶ್ವರ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿಸಿದರು.
ಫಕ್ಕೀರೇಶ್ವರ ಶ್ರೀಗಳು ಸ್ವರಚಿತ `ಅರಿವಿನ ಅಂತರಾಳ’ ಗ್ರಂಥವನ್ನು ಪಾರ್ವತಿದೇವಿ ಶಾಬಾದಿಮಠ ಅವರಿಂದ, `ಜ್ಞಾನಕಲ್ಪ’ ಹಾಗೂ `ಸುಚಿಂತನ’ ದ್ವಿತೀಯ ಮುದ್ರಣದ ಕಿರು ಗ್ರಂಥವನ್ನು ಪ್ರಸನ್ನರೇಣುಕಸ್ವಾಮಿ ಶಾಬಾದಿಮಠ ಅವರಿಂದ ಹಾಗೂ ಡಾ. ರಾಜೇಂದ್ರ ಗಡಾದ ವಿರಚಿತ `ಜನಸಾಮಾನ್ಯರ ಸ್ವಾಮೀಜಿ’ ಶ್ರೀ ಫಕ್ಕೀರೇಶ್ವರ ಶ್ರೀಗಳ ಕುರಿತು ಗ್ರಂಥದ ಮುಖಪುಟವನ್ನು ಬಿಡುಗಡೆ ಮಾಡಲಾಯಿತು.