ಖ್ಯಾತ ನಿರೂಪಕಿ ಕಂ ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊಡಗು ಮೂಲಕ ವ್ಯಕ್ತಿ ರೋಷನ್ ಎಂಬುವವರ ಜೊತೆ ಅನುಶ್ರೀ ಹಸೆಮಣೆ ಏರುತ್ತಿದ್ದಾರೆ. ಇದೀಗ ವಿವಾಹ ಆಗುವ ಹುಡುಗನ ಜೊತೆ ಅನುಶ್ರೀ ಇರೋ ಫೋಟೋ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ರೋಷನ್ ಖಾತೆ ಹೊಂದಿದ್ದು, ಅವರನ್ನು ಅನುಶ್ರೀ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದಾರೆ. ಆದರೆ, ಅವರು ಡಿಪಿಗೆ ತಮ್ಮ ಫೋಟೋನ ಹಾಕಿಲ್ಲ. ಒಂದು ನಾಯಿ ಮರಿ ಫೋಟೋ ಡಿಸ್ಪ್ಲೇನಲ್ಲಿ ಇದೆ. ಹೀಗಾಗಿ, ಅವರ ಗುರುತು ಯಾರಿಗೂ ಸಿಕ್ಕಿರಲಿಲ್ಲ. ಈಗ ರೋಷನ್ ಜೊತೆ ಅನುಶ್ರೀ ಇರೋ ಫೋಟೋ ವೈರಲ್ ಆಗಿದೆ.
ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಹಾಗೂ ರೋಷನ್ ಕಾಣಿಸಿಕೊಂಡಿದ್ದಾರೆ. ಪೂಜೆ ಮಾಡಿಸುವಾಗ ಕೆಲವರು ಇದರ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲ ಕಡೆಗಳಲ್ಲಿ ಇದು ವೈರಲ್ ಆಗಿದೆ.
ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ ಹಸೆಮಣೆ ಏರುತ್ತಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿದೆ ಎಂದು ಅನುಶ್ರೀ ಆಪ್ತರು ತಿಳಿಸಿದ್ದಾರೆ.
ಎಲ್ಲರೂ ಅಂದುಕೊಂಡಂತೆ ಇದು ಲವ್ ಮ್ಯಾರೇಜ್ ಅಲ್ಲ. ಕುಟುಂಬದವರೇ ನೋಡಿ ಗೊತ್ತು ಮಾಡಿರುವ ಪಕ್ಕ ಅರೆಜ್ ಮ್ಯಾರೇಜ್. ಇದೀಗ ಎರಡೂ ಕುಟುಂಬಗಳು ಮದುವೆಯ ಸಂಭ್ರಮದಲ್ಲಿದ್ದು, ಸಕಲ ಸಿದ್ಧತೆಗಳಲ್ಲಿ ತೊಡಗಿವೆ ಎನ್ನಲಾಗಿದೆ.