ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ರೆಡಿನ್ ಕಿಂಗ್ಸ್ಲಿ 48ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 45ನೇ ವಯಸ್ಸಿಗೆ ಮದುವೆಯಾದ ರೆಡಿನ್ ಕಿಂಗ್ಸ್ಲಿ ಮದುವೆಯಾದ ಮೂರು ವರ್ಷಕ್ಕೆ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಮಗುವಿನ ಫೋಟೋವನ್ನು ಕಿಂಗ್ಸ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅವರು ಮಗುವಿನ ಮುಖವನ್ನು ರಿವೀಲ್ ಮಾಡಿಲ್ಲ.
2023ರಲ್ಲಿ ರೆಡಿನ್ ಕಿರುತೆರೆ ನಟಿ ಸಂಗೀತಾ ಅವರನ್ನು ವಿವಾಹ ಆದರು. ಸಂಗೀತಾ ಅವರಿಗೆ ಈಗ 46 ವರ್ಷ. ಇದೀಗ ರೆಡಿನ್ ಹಾಗೂ ಸಂಗೀತಾ ಹೆಣ್ಣು ಮಗುವನ್ನು ಮನೆಗೆ ಸ್ವಾಗತಿಸಿದ್ದು ಪೋಷಕರಾದ ಸಂಭ್ರಮದಲಿದ್ದಾರೆ. ನಟಿ ಸಂಗೀತಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಗುವಿನ ಮುಖಕ್ಕೆ ಎಮೋಜಿ ಹಾಕಿ, ‘ನಿಮ್ಮೆಲ್ಲರ ಶುಭಾಶಯಗಳು ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು. ರಾಜಕುಮಾರಿ’ ಎಂದು ಬರೆದಿದ್ದಾರೆ.
2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರೆಡಿನ್ ತಮಿಳು ಚಿತ್ರರಂಗದ ಹಾಸ್ಯ ನಟರಲ್ಲಿ ಒಬ್ಬರು. ಚಿತ್ರರಂಗಕ್ಕೆ ಎಂಟ್ರಿಕೊಡುವ ಮುನ್ನ ಈವೆಂಟ್ಗಳನ್ನು ಆಯೋಜನೆ ಮಾಡುತ್ತಿದ್ದರು. 2023ರ ಡಿಸೆಂಬರ್ 10ರಂದು ಅವರು ಕಿರುತೆರೆ ನಟಿ ಸಂಗೀತಾ ಅವರನ್ನು ವಿವಾಹವಾದರು.
2021ರಲ್ಲಿ ರಿಲೀಸ್ ಆದ ಶಿವಕಾರ್ತಿಕೇಯನ್ ಅಭಿನಯದ ‘ಡಾಕ್ಟರ್’ ಚಿತ್ರದೊಂದಿಗೆ ಖ್ಯಾತಿ ಹೆಚ್ಚಿಸಿಕೊಂಡ ರೆಡಿನ್ ರಜನಿಕಾಂತ್ ನಟನೆಯ ‘ಜೈಲರ್’, ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು.