ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ವಿಧಿವಶ!

0
Spread the love

ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ ಹೊಂದಿದ್ದಾರೆ.

Advertisement

90 ವರ್ಷ ವಯಸ್ಸಾಗಿದ್ದ ಶ್ಯಾಮ್ ಬೆನಗಲ್ ಅವರು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.

ಸಂಜೆ 6.30ರ ಸುಮಾರಿಗೆ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು ಎಂದು ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಅನಂತ್ ನಾಗ್ ನಟನೆಯ ‘ಅಂಕುರ್​’, ಗಿರೀಶ್ ಕಾರ್ನಾಡ್ ಅಭಿನಯದ ‘ನಿಶಾಂತ್’, ಸ್ಮಿತಾ ಪಾಟೀಲ್ ನಟನೆಯ ‘ಮಂಥನ್’, ‘ಭೂಮಿಕಾ’ ಸೇರಿದಂತೆ ಹಲವು ಸಿನಿಮಾಗಳನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದರು. ಪ್ಯಾರಲಲ್ ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಹಿಂದಿಯಲ್ಲಿ ಅನಂತ್ ನಾಗ್, ಅಮೋಲ್ ಪಾಲೇಕರ್​, ಅಮರೀಶ್​ ಪುರಿ, ಗಿರೀಶ್ ಕಾರ್ನಾಡ್ ಅವರಂತಹ ಪ್ರತಿಭಾವಂತ ನಟರ ಜೊತೆ ಅವರು ಹಲವು ಸಿನಿಮಾಗಳನ್ನು ಮಾಡಿದ್ದರು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here