ಕನ್ನಡದ ಖ್ಯಾತ ಜಾನಪದ ಗಾಯಕ ʻಆಲೂರು ನಾಗಪ್ಪʼ ನಿಧನ!

0
Spread the love

ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ(74) ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಪ್ಪ ಅವರು ಅನಾರೋಗ್ಯದಿಂದಾಗಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

Advertisement

ನಿಂಗವ್ವ ಬೆಂಗಳೂರಿಗೆ ಬಂದು ನೋಡವ್ವ ಹಾಡಿನ ಖ್ಯಾತಿಯ ಆಲೂರು ನಾಗಪ್ಪ ಅವರು ಸಾವಿರಾರು ಲಾವಣಿ, ತತ್ವಪದಗಳ ಹರಿಕಾರಕ. ಇವರು ರಚಿಸಿ, ಹಾಡಿರುವ ಹಾಡುಗಳು ಎವರ್‌ಗ್ರೀನ್‌. ಇವರಿಗೆ ಜಾನಪದ ಸಂಗೀತದ ಮೇಲಿದ್ದ ಪ್ರೀತಿ ಎಂತಹದ್ದು ಎಂದರೆ ಇವರು ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಿಸೈನ್‌ ಮಾಡಿ ತಮ್ಮ ಆಸಕ್ತಿಗೆ ಒತ್ತು ನೀಡಿದ್ದರು.

ಆಲೂರು ನಾಗಪ್ಪ, ಗಾಯಕರಾಗಿ ಮಾತ್ರವಲ್ಲ, ಕನ್ನಡಪರ ಹೋರಾಟಗಾರರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ಮಗಳು ದಿವ್ಯ ಅಲೂಕು ಕೂಡ ನಿರೂಪಕಿ, ಗಾಯಕಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here