HomeKarnataka Newsಪ್ರವಾಸಿಗರಿಗೆ ಬ್ಯಾಡ್ ನ್ಯೂಸ್: ಮುಳ್ಳಯ್ಯನ ಗಿರಿ, ದತ್ತ ಪೀಠದ ಪ್ರವೇಶಕ್ಕೆ ನಿರ್ಬಂಧ!

ಪ್ರವಾಸಿಗರಿಗೆ ಬ್ಯಾಡ್ ನ್ಯೂಸ್: ಮುಳ್ಳಯ್ಯನ ಗಿರಿ, ದತ್ತ ಪೀಠದ ಪ್ರವೇಶಕ್ಕೆ ನಿರ್ಬಂಧ!

For Dai;y Updates Join Our whatsapp Group

ಚಿಕ್ಕಮಗಳೂರು:- ಪ್ರವಾಸಿಗರಿಗೆ ಬ್ಯಾಡ್ ನ್ಯೂಸ್ ಹೊರ ಬಿದ್ದಿದ್ದು, ಮುಳ್ಳಯ್ಯನ ಗಿರಿ, ದತ್ತ ಪೀಠದ ಪ್ರವೇಶಕ್ಕೆ ನಿರ್ಬಂಧ ಏರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮಳೆಯಿಂದ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಭೂ ಕುಸಿತ, ಗುಡ್ಡ ಕುಸಿತವಾಗಿದ್ದು ಒಂದು ವಾರಗಳ ಕಾಲ‌ ಪ್ರವಾಸಿಗರಿಗೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಪ್ರವೇಶಕ್ಕೆ ಅವಕಾಶವಿಲ್ಲ. ಜುಲೈ 31ರ ವರೆಗೂ ಮುಳ್ಳಯ್ಯನಗಿರಿ ಭೇಟಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ

ಪ್ರವಾಸಿಗರು ತೆರಳದಂತೆ ಕೈಮರ ಚೆಕ್ಪೋಸ್ಟ್ ಬಳಿ ಗೇಟ್ ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು ಶೃಂಗೇರಿ ಮಾರ್ಗ ಮಧ್ಯೆ ನೆಮ್ಮಾರು ಗ್ರಾಮದ ಬಳಿ ಹತ್ತಾರು ಕಡೆ ಭೂ ಕುಸಿತ, ಗುಡ್ಡ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಲಾಗಿದ್ದು 12,000 ಟನ್ ತೂಕದ ಲಾರಿ ಸೇರಿದಂತೆ ವಾಹನಗಳಿಗೆ ಸಂಚಾರ ನಿಷೇಧ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೊಂಚ ಮಳೆ ವಿರಾಮ ನೀಡಿದ್ದು ಒಂದು ವಾರಗಳ‌ ಕಾಲ ಸುರಿದ ಮಳೆ‌ ವಾಡಿಕೆ‌ ಪ್ರಮಾಣದ 25% ಅಷ್ಟು ಹೆಚ್ಚಿದ್ದು ಗಾಳಿ ಸಹಿತ ಸುರಿದ ಮಳೆ ಒಂದೇ ವಾರಕ್ಕೆ ನೂರು ಕೋಟಿ ನಷ್ಟ ಮಾಡಿದೆ ರಾಜ್ಯದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರತಿ ದಿನ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ರಾಜ್ಯ, ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ವೀಕೆಂಡ್​, ರಜಾ ದಿನ ಬಂತೆಂದರೆ ಇಲ್ಲಿ ಜನ ಪ್ರವಾಹವೇ ಕಂಡು ಬರುತ್ತದೆ. ಆದರೆ ಇದೀಗ, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿದು, ಬೃಹತ್​ ಗಾತ್ರದ ಕಲ್ಲು, ಮಣ್ಣು, ಮರ ರಸ್ತೆಗೆ ಬಿಳುತ್ತಿವೆ. ಹೀಗಾಗಿ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img