ಸ್ಯಾಂಡಲ್ ವುಡ್ ನಟಿ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೊಡಗು ಮೂಲದ ಉದ್ಯಮಿ ರೋಷನ್ ಅವರೊಂದಿಗೆ ಅನುಶ್ರೀ ಸಪ್ತಪದಿ ತುಳಿಯಲು ಸಜ್ಜಾಗಿದ್ದು ಆ.28 ರಂದು ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.
ಬೆಂಗಳೂರಿನ ಹೊರ ವಲಯದ ರೆಸಾರ್ಟ್ ನಲ್ಲಿ ಅನುಶ್ರೀ ಹಾಗೂ ರೋಷನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆಗಸ್ಟ್ 28 ರಂದು ಬೆಳಗ್ಗೆ 10:56ರಂದು ಶುಭ ಮುಹೂರ್ತದಲ್ಲಿ ಅನುಶ್ರಿ ರೋಷನ್ ಅವರ ಕೈ ಹಿಡಿಯಲಿದ್ದಾರೆ. ಅನುಶ್ರೀ ಅವರದ್ದು ಇದು ಲವ್ ಮ್ಯಾರೇಜಾ? ಅಲ್ಲಾ ಪಕ್ಕಾ ಅರೇಂಜ್ ಮ್ಯಾರೇಜ್ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಅನುಶ್ರೀ ಅವರು ಕುಟುಂಬದವರು ನೋಡಿದ ಹುಡುಗನ ಜೊತೆ ವಿವಾಹ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
`ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಅನುಶ್ರೀ ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ. ಇದುವರೆಗೂ ಮದುವೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಅನುಶ್ರೀ ಇದೀಗ ಇದೇ ಮೊದಲ ಭಾರಿಗೆ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.