ಮೋಹಕತಾರೆ ರಮ್ಯಾ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದ್ದು, ಸಿನಿಮಾ ಕಮ್ ಬ್ಯಾಕ್ ಬಗ್ಗೆ ಮಹತ್ತರ ಸುಳಿವು ಕೊಟ್ಟಿದ್ದಾರೆ.
Advertisement
ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸೋದಾಗಿ ನಟಿ ಹೇಳಿದ್ದು, ರಮ್ಯಾ ಮಾತು ಕೇಳಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಫಿಲ್ಮ್ ಫಿಸ್ಟಿವಲ್ ಸಂವಾದದಲ್ಲಿ ಭಾಗಿಯಾಗಿದ್ದ ರಮ್ಯಾ ಅವರು ಸಿನಿಮಾ ಕಮ್ ಬ್ಯಾಕ್ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈಗಾಗಲೇ 4 ಸ್ಕ್ರಿಪ್ಟ್ ಕೇಳಿದ್ದೇನೆ. ಬಹುಶಃ ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ನಟಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ತಾವ್ಯಾಕೆ ನಟಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದು ಒಟಿಟಿಗಾಗಿಯೇ ಎಂದು ಮಾಡಿದ ಸಿನಿಮಾವಾಗಿತ್ತು. ನನ್ನ ಅಭಿಮಾನಿಗಳ ಮುಂದೆ ಬರುವಾಗ ಬೆಳ್ಳಿಪರದೆಯಲ್ಲೇ ಕಾಣಿಸಿಕೊಳ್ಳಬೇಕೆಂದಿತ್ತು ಎಂದು ರಮ್ಯಾ ಹೇಳಿದ್ದಾರೆ.