ರೈತರ ಗೋಳು ಕೆಳುವವರಿಲ್ಲ : ವಾಯ್.ಎನ್. ಗೌಡರ

0
vay. n. gowdara
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಸಿಂಗಟಾಲೂರ ಏತನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಹಡಗಲಿ ಭಾಗದಲ್ಲಿ ಕಾಲುವೆ ಮೂಲಕ ನೀರು ಒದಗಿಸಿದ್ದು ರೈತರಿಗೆ ವರದಾನವಾಗಿದೆ. ಆದರೆ ಗದಗ ಜಿಲ್ಲೆ ಭಾಗದಲ್ಲಿ ಸೂಕ್ಷ್ಮ ಹನಿ ನೀರಾವರಿ ಯೋಜನೆಯ ಕಳಪೆ ಕಾಮಗಾರಿಯಿಂದ ರೈತರಿಗೆ ನೀರು ಸಿಗದೆ ನಿರಾಶರಾಗಿದ್ದಾರೆ. ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಜಮೀನುಗಳು ನೂರಾರು ಗಾಳಿ ವಿದ್ಯುತ್ ಫ್ಯಾನ್‌ಗಳು, ಸೋಲಾರ್ ಪ್ಯಾನೆಲ್‌ಗಳ ಅಳವಡಿಕೆಗೆ ಒಳಗಾಗುತ್ತಿರುವುದು ಖಂಡನೀಯ ಎಂದು ಮುಂಡರಗಿ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ವಾಯ್.ಎನ್. ಗೌಡರ ಹೇಳಿದರು.

Advertisement

ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಖಾಸಗಿ ಕಂಪನಿಗಳು ಮಾಡಿರುವ ಕಳಪೆ ಕಾಮಗಾರಿಯನ್ನು ವಿವರಿಸಿ ಮಾತನಾಡಿದ ಅವರು, ಮುಂಡರಗಿ ತಾಲೂಕು ಕಳೆದ 40 ವರ್ಷಗಳಿಂದ ಮಳೆಯ ಅಭಾವದಿಂದ ಪರಿತಪಿಸುತ್ತಿದೆ. 2015ರಲ್ಲಿ 5768 ಕೋಟಿ ರೂ ಅಂದಾಜು ವೆಚ್ಚಕ್ಕೆ ಅನುಮೋದನೆ ಸಿಕ್ಕಿತ್ತು. ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಮ್ಮ ಭಾಗದ ರೈತರಿಗೆ ನೀರು ಸಿಗದಂತಾಗಿ ರೈತರು ಬಂಡವಾಳಶಾಹಿಗಳಿಗೆ ಜಮೀನು ಮಾರಾಟ ಮಾಡುವಂತಾಗಿದೆ.

ಕಳಪೆ ಕಾಮಗಾರಿ, ಬಂಡವಾಳಶಾಹಿ ಖಾಸಗಿ ಕಂಪನಿಗಳ ಕಪಿಮುಷ್ಠಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಿಲುಕಿದ ಪರಿಣಾಮ, ರೈತರ ಗೋಳು ಕೆಳುವವರೇ ಇಲ್ಲದಂತಾಗಿದೆ. ಗಾಳಿವಿದ್ಯುತ್ ಫ್ಯಾನ್‌ಗಳ ತಿರುಗುವಿಕೆಯಿಂದ ಮೋಡಗಳು ಚದುರಿಹೋಗಿ ಮಳೆಯ ಅಭಾವ ಸೃಷ್ಟಿಯಾಗುತ್ತಿದೆ. ಆದ್ದರಿಂದ ಈ ಗಾಳಿ ವಿದ್ಯುತ್ ಘಟಕಗಳಿಗೆ ಕೊಟ್ಟಿರುವ ಪರವಾನಿಗೆಯನ್ನು ರದ್ದುಗೊಳಿಸಬೇಕು. ನೀರಾವರಿ ಅಚ್ಚುಕಟ್ಟು ಪ್ರದೇಶವನ್ನು ಆಯಾ ರೈತರಿಗೆ ಉಳಿಸಬೇಕು. ಕಾಲುವೆ ಮೂಲಕ ನೀರು ಒದಗಿಸಿ ಜಮೀನುಗಳನ್ನು ಹಸಿರುಗೊಳಿಸಿ ರೈತರನ್ನು ಉಸಿರಾಡುವಂತೆ ಮಾಡಬೇಕೆಂದು ಆಗ್ರಹಿಸಿದರು.

ರೈತ ಮುಖಂಡರಾದ ಮದಾರಸಾಬ ಸಿಂಗನಮಲ್ಲಿ, ಹನುಮಂತ ಹೊಸಮನಿ, ಮಾರುತಿ ಬಳಗಾನೂರ, ರಾಮಣ್ಣ ಬಳಗಾನೂರ, ಶಂಕರಗೌಡ ಪಾಟೀಲ್, ಶೇಖಣ್ಣ ಚಿಗರಿ, ಮುತ್ತು ಹುಯಿಲಗೊಳ ಸೇರಿದಂತೆ ವಿವಿಧ ಗ್ರಾಮದ ರೈತ ಮುಖಂಡರು ಇದ್ದರು.


Spread the love

LEAVE A REPLY

Please enter your comment!
Please enter your name here