ರೈತರ ಸ್ವಾವಲಂಬಿ ಬದುಕಿಗೆ ನೆಲೆ ಸಿಕ್ಕಿದೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆಗಸ್ಟ್ 15ರಂದು ಮೂವರು ರೈತರಿಗೆ ಟ್ರಾಕ್ಟರ್‌ಗಳನ್ನು ವಿತರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು.

Advertisement

ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿ, ರೈತರಿಗೆ ಟ್ರಾಕ್ಟರ್‌ಗಳನ್ನು ವಿತರಿಸಿ ಮಾತನಾಡಿ, ಇಂದು ನಮಗೆಲ್ಲ ಸುದಿನ. ನಮಗೆ ಸ್ವಾತಂತ್ರ್ಯ ಸಿಕ್ಕು ಇಂದಿಗೆ 79ನೇ ವರ್ಷದಲ್ಲಿ ಕಾಲಿರಿಸಿದ್ದೇವೆ. ಇಷ್ಟು ವರ್ಷಗಳಲ್ಲಿ ನಮ್ಮ ದೇಶವು ಎಲ್ಲ ರಂಗಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದು, ಇನ್ನೂ ಸಾಧನೆಯ ಹಾದಿಯಲ್ಲಿ ಮುಂದುವರೆದಿದೆ ಎಂದರು.

ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರವು ಬಡವರಿಗೆ ಅನುಕೂಲವಾಗಲೆಂದೇ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಐದು ಗ್ಯಾರಂಟಿಗಳನ್ನು ನೀಡಿದೆ. ರೈತರ ಸಲುವಾಗಿ ಹಲವಾರು ಯೋಜನೆಗಳನ್ನು ಕೈಗೊಂಡಿರುವ ಸರಕಾರ ರೈತರ ಸ್ವಾವಲಂಬಿ ಬದುಕಿಗೆ ಸೂಕ್ತ ನೆಲೆ ಒದಗಿಸಲು ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕವೂ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.

ರೈತರಾದ ಸೋಮನಗೌಡ ಯಲ್ಲಪ್ಪಗೌಡ್ರ, ಅಂದೇಶ ಶಿರೂರ ಮತ್ತು ಈರಪ್ಪ ಸೂಡಿ ಟ್ರಾಕ್ಟರ್ ಪಡೆದುಕೊಂಡರು. ವೇದಿಕೆಯ ಮೇಲೆ ಮುಖ್ಯ ಶಿಕ್ಷಕಿ ಎಸ್.ಎಸ್. ಚುಂಚಾ, ಮುಖ್ಯ ಶಿಕ್ಷಕ ಎಚ್.ಎಸ್. ಬಿಂಗಿ, ಜಿ.ಎಸ್. ಬಲಕುಂದಿ ಇದ್ದರು.

ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಗದ ನಿರ್ದೇಶಕರಾದ ಎ.ಎಂ. ಪಾಟೀಲ, ಎಂ.ಎಲ್. ಕಳ್ಳಿಗುಡ್ಡ, ಎಸ್.ಬಿ. ಗೆದಗೇರಿ, ಬಿ.ಎಚ್. ಮೂಲಿಮನಿ, ಕೆ.ಆರ್. ಮಡಿವಾಳರ, ಮುಖಂಡರಾದ ಅಂದಪ್ಪ ತೋಟದ, ಭೀಮಪ್ಪ ಚಲವಾದಿ, ಸೋಮರಡ್ಡಿ ದಂಡಮ್ಮನವರ, ಈರಪ್ಪ ಸೂಡಿ, ಶರಣಪ್ಪ ಸತ್ಯಮ್ಮನವರ, ಎ.ಎಸ್. ಅಂಗಡಿ, ವಿ.ಎಸ್. ನವಲಗಿಂದ, ಎಸ್.ಎಂ. ತಳವಾರ ಮತ್ತು ಶಾಲಾ ಸಿಬ್ಬಂದಿಯವರು, ವಿದ್ಯಾರ್ಥಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here