HomeGadag Newsಸ್ವತಃ ರಸ್ತೆ ದುರಸ್ತಿಗೆ ಮುಂದಾದ ರೈತರು

ಸ್ವತಃ ರಸ್ತೆ ದುರಸ್ತಿಗೆ ಮುಂದಾದ ರೈತರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರು ತಮ್ಮ ಹೊಲಕ್ಕೆ ಹೋಗುವ ರಸ್ತೆಗಳ ಸುಧಾರಣೆಗೆ ಹಲವಾರು ಬಾರಿ ಸರಕಾರದ ಬಳಿ ಗೋಗರೆಯುವುದು ಸಾಮಾನ್ಯ ಎನ್ನುವಂತಾಗಿದ್ದು, ಸರಕಾರ ರೈತರ ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ರೈತರೇ `ನಮ್ಮ ಹೊಲ-ನಮ್ಮ ರಸ್ತೆ’ ದುರಸ್ತಿಗೆ ಮುಂದಾಗಿದ್ದಾರೆ.

ಪಟ್ಟಣದಿಂದ ಯತ್ನಳ್ಳಿ ಹೋಗುವ ದಾರಿ ಮಧ್ಯೆ ದನದಮನೆ ಅವರ ಜಮೀನಿನಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸಣ್ಣ ಬ್ರಿಡ್ಜ್ ತುಂಬಿ ಹರಿದ ನೀರಿನ ರಭಸಕ್ಕೆ ದಾರಿ ಕೊಚ್ಚಿಹೋಗಿ ಕೊರಕಲು ಬಿದ್ದಿದ್ದು, ರೈತರಿಗೆ ಅನಾನುಕೂಲವಾಗಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ, ಸಂಬಂಧಿಸಿದ ಇಲಾಖೆಗೆ ಮೌಖಿಕವಾಗಿ ರಸ್ತೆ ಸುಧಾರಣೆ ಮಾಡುವಂತೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಬೇಸತ್ತ ರೈತರು ಗುದ್ದಲಿ-ಸಲಕಿ ಹಿಡಿದು ರಸ್ತೆಗಿಳಿದು ಕಿತ್ತು ಹೋಗಿರುವ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಹಾದೇವಪ್ಪ ಕುಂದಗೋಳ, ದ್ಯಾಮಣ್ಣ ಕಮತದ, ದುಂಡೆಶ ಕೋಟಗಿ, ಅಕಂಡಯ್ಯ ಅಕಳಂಡಸ್ವಾಮಿಮಠ, ಸೋಮಣ್ಣ ಮಾಗಡಿ, ಸೋಮಣ್ಣ ಹಾದಿಮನಿ ಸೇರಿದಂತೆ ಅನೇಕ ರೈತರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!