ದಾವಣಗೆರೆ:- ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಮುಂದುವರಿದಿದೆ. ಕಿರುಕುಳದಿಂದ ಬೇಸತ್ತ ಏಳೆಂಟು ಕುಟುಂಬಗಳು ಊರು ಬಿಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಿವಗಂಗನಾಳ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ಹಲವು ಕುಟುಂಬಗಳಿಗೆ ಸಾಲದ ಕಂತು ಪಾವತಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಪದೇ ಪದೇ ಕಿರುಕುಳ ನೀಡುತ್ತಾ ಬಂದಿದ್ದಾರೆ. ನಿಮಗೆ ಸಿಬಿಲ್ ಸ್ಕೋರ್ ಬರದಿದ್ದರೆ ಎಲ್ಲೂ ನಯಾ ಪೈಸೆ ಸಾಲ ಹುಟ್ಟಲ್ಲ ಅಂತ ಹೆದರಿಸಿದ್ದಾರೆ.
ಕೆಲವರನ್ನ ಪೊಲೀಸ್ ಠಾಣೆಗೆ ಕರೆಸಿ ಬೆದರಿಸುವಂತೆ ಮಾಡಿದ್ದಾರೆ. ಯಾರ ಕೈ-ಕಾಲು ಹಿಡಿದಾದರೂ ಸಾಲ ತಂದುಕೊಡು ಅಂತ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಬೇಸತ್ತ ಶಿವಗಂಗನಾಳ ಗ್ರಾಮದ ಕುಟುಂಬಗಳು ಮನೆಗೆ ಬೀಗ ಹಾಕಿಕೊಂಡು ಊರು ಬಿಟ್ಟಿವೆ.