ಕುಡಿಯುವ ನೀರಿನ ಸಮಸ್ಯೆ ಉಲ್ಬಣ: ಪುರಸಭೆಯ ಸದಸ್ಯರನ್ನು ಹುಡುಕಿಕೊಡಲು ಕರವೇ ಮನವಿ !

0
Find a council member!
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಒಂದೂವರೆ ತಿಂಗಳಿಂದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತವಾಗಿದ್ದರೂ ಈ ಬಗ್ಗೆ ಗಮನ ಹರಿಸದ ಪುರಸಭೆಯ ಆಡಳಿತ ಮಂಡಳಿಯ ಸದಸ್ಯರು ಸಾರ್ವಜನಿಕರಿಂದ ತಪ್ಪಿಸಿಕೊಡು ಓಡಾಡುತ್ತಿದ್ದಾರೆ. ಪುರಸಭೆಯ ಸದಸ್ಯರನ್ನು ಪತ್ತೆ ಮಾಡಿಕೊಡಬೇಕೆಂಬ ವಿಶೇಷ ಮನವಿ ಪತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದಿಂದ ಪಟ್ಟಣದ ಪೊಲೀಸ್ ಠಾಣೆಗೆ ಸಲ್ಲಿಸಿದ್ದಾರೆ.

Advertisement

ಮನವಿ ಪತ್ರದಲ್ಲಿ ಪಟ್ಟಣದಲ್ಲಿ ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಪುರಸಭೆಗೆ ಗ್ರಹಣ ಹಿಡಿದಂತಾಗಿದೆ. ಸಾಕಷ್ಟು ಸಮಸ್ಯೆಗಳು, ಸಾರ್ವಜನಿಕರ ಬೇಕು-ಬೇಡಿಕೆಗಳಿಗೆ ಸ್ಪಂದಿಸಬೇಕಾದ ಸದಸ್ಯರು ಎಲ್ಲಿ ಹೋಗಿದ್ದಾರೋ ಎಂಬ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ಆಡಳಿತ ಮಂಡಳಿಯ ಅನುಮತಿಯಿಲ್ಲವೆಂಬ ಕಾರಣವನ್ನು ಹೇಳಿ ಮುಖ್ಯಾಧಿಕಾರಿಗಳು ಜಾಣ ಮೌನ ವಹಿಸುತ್ತಾರೆ. ಆದ್ದರಿಂದ ದಯವಿಟ್ಟು ಪುರಸಭೆ ಸದಸ್ಯರನ್ನು ಹುಡುಕಿಕೊಡಬೇಕು ಎಂದು ಮನವಿಯಲ್ಲಿ ಕೋರಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ, ಅಂಬರೇಶ ಗಾಂಜಿ, ಅರ್ಜುನ ಭಾಂಡಗೆ, ಶ್ರೇಯಾಂಕ ಹಿರೇಮಠ, ಸುಷ್ಮಾ ಸರ್ವದೆ, ಪ್ರವೀಣ ದಶಮನಿ, ಭರಮಣ್ಣ ಗೌಳಿ, ಗಿರೀಶ ಗೌಳಿ, ಮಹೇಶ ಕರಮಣ್ಣವರ, ಮಂಜುನಾಥ ಗಾಂಜಿ, ಚಂದ್ರು ಪಾಣಿಗಟ್ಟಿ, ಗೋವಿಂದ ಗೋಸಾವಿ, ತೇಜು ಉದ್ದನಗೌಡ್ರ, ಕುಮಾರ ಕನವಳ್ಳಿ, ಕುಮಾರ ಶೆಟ್ಟರ, ಲತಾ ಅಕ್ಕಸಾಲಿ, ತೇಜಸ್ವಿನಿ ಗುರಪ್ಪಗೌಡ್ರ ಸೇರಿ ಹಲವರಿದ್ದರು.


Spread the love

LEAVE A REPLY

Please enter your comment!
Please enter your name here