ಯಾದಗಿರಿ:- ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಪುರ ಸಮೀಪದಲ್ಲಿರುವ ಕಾಟನ್ ಮಿಲ್ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿರುವ ಘಟನೆ ಜರುಗಿದೆ.
ಘಟನೆಯಲ್ಲಿ 1 ಕೋಟಿ ರೂ. ಮೌಲ್ಯದ 60 ಟನ್‌ಗೂ ಅಧಿಕ ಕಾಟನ್ ಬೆಂಕಿಗಾಹುತಿಯಾಗಿದೆ. ಈ ಕಾಟನ್ ಮಿಲ್, ಸಾಹೇಲ್‌ಗೆ ಎಂಬುವವರಿಗೆ ಸೇರಿದ್ದಾಗಿದೆ. ವಿದ್ಯುತ್ ಶಾರ್ಟ್ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೆಂಕಿ ಕೆನ್ನಾಲಿಗೆಗೆ ಧಗಧಗನೆ ಕಾಟನ್ ಹೊತ್ತಿ ಉರಿದಿದ್ದು, 1 ಕೋಟಿ ರೂ. ಮೌಲ್ಯದ 60 ಟನ್‌ಗೂ ಅಧಿಕ ಕಾಟನ್ ಬೆಂಕಿಗಾಹುತಿಯಾಗಿದೆ.
ಕಾಟನ್ ಮಿಲ್‌ನಲ್ಲಿ ಕೆಲ ಯಂತ್ರಗಳು ಸುಟ್ಟು ಹೋಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.



