BBK11: ತೆಲುಗಿನಲ್ಲಿ ಫೈಯರ್, ಕನ್ನಡದಲ್ಲಿ ಪ್ಲಾಫ್: ದಿಢೀರ್ ಬಿಗ್ ಮನೆಯಿಂದ ಹೊರ ಹೋಗಿದ್ದೇಕೆ ಶೋಭಾ!?

0
Spread the love

ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಶೋಭಾ ಶೆಟ್ಟಿ ಅವರು ಮೊದ ಮೊದಲು ಜೋರಾಗಿ ಆರ್ಭಟಿಸಿದರು.

Advertisement

ಶೋಭಾ ಶೆಟ್ಟಿಗೆ ಬಿಗ್ ಬಾಸ್ ಹೊಸದೇನಲ್ಲ. ತೆಲುಗು ಬಿಗ್ ಬಾಸ್ ನಲ್ಲಿ ಸ್ಪರ್ಧಿ ಆಗಿದ್ದ ಶೋಭಾ ತಮ್ಮ ನೇರ ನುಡಿಗಳಿಂದ ಸಖತ್ ಮಿಂಚಿದ್ದರು. ಅಲ್ಲದೇ ಒಳ್ಳೆಯ ಹೆಸರು ಮಾಡಿದರು. ಆದರೆ ಕನ್ನಡ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಅವರು, ಆರಂಭದಲ್ಲಿ ಅಬ್ಬರಿಸಿದ್ದರಾದರೂ ಯಾಕೋ 2ನೇ ವಾರಕ್ಕೆ ಫುಲ್ ಡಲ್ ಆದರು.

ಅಲ್ಲದೇ ಈ ವಾರ ನಾಮಿನೇಟ್ ಕೂಡ ಆಗಿದ್ದರು. ಇದರಿಂದ ಶೋಭಾ ಅವರು, ನನ್ನನ್ನು ಜನತೆ ಸೇವ್ ಮಾಡಲ್ಲ ಮನೆಯಿಂದ ಹೋಗುತ್ತೇನೆ ಎಂದು ಭಾವಿಸಿದರು. ಆದರೆ ಭಾನುವಾರ ನಡೆದಿದ್ದೇ ಬೇರೆ.

ಜನರಿಂದ ಅತಿ ಹೆಚ್ಚು ವೋಟು ಪಡೆದಿದ್ದ ಶೋಭಾ ಅವರಿಗೆ ಕಿಚ್ಚ ಸುದೀಪ್ ಯುವರ್ ಸೇಫ್ ಅಂತ ಘೋಷಿಸಿದರು. ಈ ವೇಳೆ ದೊಡ್ಡ ಡ್ರಾಮವೇ ನಡೆದು ಹೋಯ್ತು.

ಜನರು ಹಾಕಿದ ವೋಟ್​ನಿಂದ ಸೇವ್ ಆಗಿದ್ದ ಶೋಭಾ ಶೆಟ್ಟಿ ಅವರು ಅಳಲು ಆರಂಭಿಸಿದ್ದರು. ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದರು. ಆದರೆ ಅವರಿಗೆ ಸುದೀಪ್ ಸಮಾಧಾನ ಮಾಡಿ, ಬುದ್ಧಿಮಾತು ಹೇಳಿದ ಬಳಿಕ ಮನಸ್ಸು ಬದಲಾಯಿಸಿದರು. ಆದರೆ ಕೊನೆಯಲ್ಲಿ ಇನ್ನೊಂದು ಡ್ರಾಮಾ ಆರಂಭಿಸಿದರು. ತಾವು ಹೊರಗೆ ಹೋಗಲೇಬೇಕು ಎಂದು ಶೋಭಾ ಶೆಟ್ಟಿ ಹಠ ಹಿಡಿದರು. ಆಗ ಸುದೀಪ್ ಕೋಪ ನೆತ್ತಿಗೇರಿತು.

ಭಾನುವಾರದ ಎಪಿಸೋಡ್​ ಮುಗಿಯುವಾಗ ಸುದೀಪ್ ಅವರು ಗರಂ ಆಗಿ ಮಾತನಾಡಿದ್ದರು. ‘ನೀವು ಈ ಮನೆಯಿಂದ ಕೂಡಲೇ ಹೊರಗೆ ಹೋಗಿ’ ಎಂದು ಶೋಭಾಗೆ ಸುದೀಪ್ ಆಜ್ಞೆ ಮಾಡಿದ್ದರು. ಆದರೆ ಶೋಭಾ ಎಲಿಮಿನೇಟ್ ಆದರೋ ಇಲ್ಲವೋ ಎಂಬುದು ಖಚಿತವಾಗಿರಲಿಲ್ಲ. ಸೋಮವಾರದ ಸಂಚಿಕೆಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ.

ಶೋಭಾ ಅವರು ಮುಖ್ಯ ದ್ವಾರದ ಬಳಿ  ನಿಂತುಕೊಂಡು ‘ಈಗ ಹೋಗಬೇಕು ಅಂತ ಅನಿಸುತ್ತಿಲ್ಲ’ ಎಂದು ಮತ್ತೆ ಹೊಸ ಡ್ರಾಮಾ ಶುರು ಮಾಡಲು ಮುಂದಾದರೂ ಕೂಡ ಬಿಗ್ ಬಾಸ್​ ಮನಸ್ಸು ಕರಗಲಿಲ್ಲ. ಕಡೆಗೂ ಮುಖ್ಯದ್ವಾರ ಓಪನ್ ಆಯಿತು. ಶೋಭಾ ಹೊರಗೆ ಹೋಗಲೇಬೇಕಾಯಿತು.

ತೆಲುಗು ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಅವರು ಸಖತ್ ಸೌಂಡು ಮಾಡಿದ್ದರು. ತೆಲುಗು ಕಿರುತೆರೆಯಲ್ಲಿ ಅವರಿಗೆ ಸಿಕ್ಕಾಪಟ್ಟೆ ಹೆಸರು ಇದೆ. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಯಿತು.


Spread the love

LEAVE A REPLY

Please enter your comment!
Please enter your name here