ವಿಜಯಸಾಕ್ಷಿ ಸುದ್ದಿ, ನವಲಗುಂದ : 2024ರ ಮಾರ್ಚ್-ಎಪ್ರಿಲ್ನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಣ್ಣಿಗೇರಿಯ ನಿಂಗಮ್ಮ ಎಸ್.ಹೂಗಾರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನಿಶಾದ ಹಸನ್ಸಾಬ ಘೂಡುನಾಯ್ಕರ 625 ಕ್ಕೆ 609 (ಶೇ.97.44) ಅಂಕಗಳನ್ನು ಪಡೆಯುವ ಮೂಲಕ ವಿಭಜನಾಪೂರ್ವ ನವಲಗುಂದ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಅಭಿನಂದನೆಗೆ ಪಾತ್ರಳಾಗಿದ್ದಾಳೆ.
Advertisement
ವಿದ್ಯಾರ್ಥಿನಿಯ ಈ ಸಾಧನೆಗೆ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀಮತಿ ನಿಂಗಮ್ಮ ಎಸ್.ಹೂಗಾರ ಸಮೂಹ ವಿದ್ಯಾಲಯಗಳ ಪ್ರಾಚಾರ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ಬಳಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನಿಶಾದ್ ಅಣ್ಣಿಗೇರಿ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಹಸನ್ ಸಾಬ ಘೂಡುನಾಯ್ಕರ ಅವರ ಪುತ್ರಿಯಾಗಿದ್ದಾಳೆ.