ಮೈಸೂರು:- ಅನಾರೋಗ್ಯದಿಂದ ಬಳಲುತ್ತಿದ್ದ ಐದು ವರ್ಷದ ತಾಯಮ್ಮ ಹೆಸರಿನ ಹುಲಿ ಇಂದು ಸಾವನ್ನಪ್ಪಿರುವ ಘಟನೆ ಮೈಸೂರು ಮೃಗಾಲಯದಲ್ಲಿ ಜರುಗಿದೆ.
ಈ ಹುಲಿಯನ್ನು 2021 ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಿಸಿ ಮೃಗಾಲಯಕ್ಕೆ ತಂದಿದ್ದರು. ಅದರ ನಂತರವೂ ಮೃಗಾಲಯ ಸಿಬ್ಬಂದಿ ನಿರಂತರವಾಗಿ ಆರೈಕೆ ಮಾಡುತ್ತಿದ್ದರು. ಕಳೆದ 10 ದಿನಗಳಿಂದ ತಾಯಮ್ಮ ಹುಲಿಯು ರಕ್ತಕಣದ ಸಮಸ್ಯೆಯಿಂದ ಬಳಲುತ್ತಿತ್ತು. ಈ ಹಿನ್ನೆಲೆ, ಮೃಗಾಲಯದ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದರೂ ಆರೋಗ್ಯ ಸ್ಥಿತಿ ಉತ್ತಮವಾಗದೆ, ಆಹಾರವನ್ನು ತ್ಯಜಿಸಿದ ಕಾರಣ ಹುಲಿ ಸಾವನ್ನಪ್ಪಿದೆ.



