ಜನಪದ ಸಾಹಿತ್ಯ ಎಲ್ಲ ಸಾಹಿತ್ಯಕ್ಕೆ ಮೂಲ: ಬಸವರಾಜ ಮಹಾಸ್ವಾಮಿಗಳು 

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜನಪದ ಸಾಹಿತ್ಯದ ಸತ್ವ, ಶಕ್ತಿ ಮಾನವನ ಬದುಕಿಗೆ ಮೂಲ ಪ್ರೇರಣೆಯಾಗಿದೆ. ಎಲ್ಲ ಸಾಹಿತ್ಯದ ಉಗಮಕ್ಕೆ ಇದೇ ಮೂಲ. ಇಂದಿನ ತಲೆಮಾರಿನ ಯುವಕರು ಜನಪದ ವೈವಿಧ್ಯದಲ್ಲಿ ಆಸಕ್ತಿಯನ್ನು ತಾಳಬೇಕು. ಈ ದಿಸೆಯಲ್ಲಿ ಡಾ. ಸಿದ್ಧಣ್ಣ ಜಕಬಾಳ ಇವರ ಕೊಡುಗೆ ಅಪಾರವಾದುದು ಎಂದು ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹಮಠದ ಪೂಜ್ಯ ಬಸವರಾಜ ಮಹಾಸ್ವಾಮಿಗಳು ತಿಳಿಸಿದರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗದಿಂದ ಜರುಗಿದ ಪ್ರೊ. ಸಿ.ವಿ. ಕೆರಿಮನಿ ದತ್ತಿ ಕಾರ್ಯಕ್ರಮದಲ್ಲಿ ಡಾ. ಸಿದ್ಧಣ್ಣ ಜಕಬಾಳ ಇವರಿಗೆ `ಪ್ರೊ. ಸಿ.ವಿ. ಕೆರಿಮನಿ ತಿರುಳ್ಗನ್ನಡ ಸಿರಿ’ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವ್ಯಕ್ತಿ ಸತ್ತಮೇಲೆ ವ್ಯಕ್ತಿ ಮಾಡಿದ ಮಹತ್ಕಾರ್ಯಗಳು, ಶೋಧನೆಗಳು, ಸಂಶೋಧನೆಗಳು ಹಾಗೇಯೇ ಉಳಿಯಬೇಕು, ಇತರರಿಗೆ ಉಪಯೋಗವಾಗಬೇಕು ಎನ್ನುವಂತೆ ಸಿ.ವಿ. ಕೆರಿಮನಿಯವರು ಬದುಕಿದ್ದಾರೆಂದು ತಿಳಿಸಿದರು.

ಸಾಹಿತಿ ಪೂರ್ಣಾಜಿ ಕರಾಟೆ ಮಾತನಾಡಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರವನ್ನು ಕಾರ್ಯಕ್ಷೇತ್ರ ಮಾಡಿಕೊಂಡು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಸರಸ್ವತಿಯ ಸೇವೆ ಮಾಡಿದ ಕೆರಿಮನಿಯವರು ಅರ್ಪಣಾ ಮನೋಭಾವದ ಕನ್ನಡ ಪ್ರಾಧ್ಯಾಪಕ, ಪ್ರಾಚಾರ್ಯ, ಸೃಜನಶೀಲ ಸಾಹಿತಿಗಳಾಗಿ ಅಪಾರ ಶಿಷ್ಯ ಬಳಗ ಹೊಂದಿ ಮೂವತ್ತಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆಂದರು.

2024ರ ಪ್ರಥಮ ಪ್ರೊ. ಸಿ.ವಿ. ಕೆರಿಮನಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಎ.ಬಿ. ಹಿರೇಮಠ ಮಾತನಾಡಿ, ಕನ್ನಡದ ದಿಗ್ಗಜರಾದ ಕೆರಿಮನಿ ಅವರು ಶಿರಹಟ್ಟಿ ತಾಲೂಕಾಧ್ಯಕ್ಷರಾಗಿ ಉತ್ಕೃಷ್ಟ ರೀತಿಯ ಕಾರ್ಯ ನಿರ್ವಹಿಸಿದ್ದಾರೆ. ಹೊಸ ಜಿಲ್ಲೆಯಾದ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಲಕ್ಷ್ಮೇಶ್ವರದಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಿಸಿದರು. ಅನೇಕ ಸಾಹಿತಿಗಳಿಗೆ ಮಾರ್ಗದರ್ಶನ ನೀಡಿದರು. ಅನೇಕ ಗ್ರಂಥಗಳು ರಚನೆಯಾದವು ಎಂದು ತಿಳಿಸಿದರು.

ಡಾ. ಜಕಬಾಳ ಡಾ. ಕೆರಿಮನಿಯವರ ಜೊತೆಗಿನ ಒಡನಾಟವನ್ನು ನೆನೆದರು. ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರೊ. ಸಿ.ವಿ. ಕೆರಿಮನಿ ಅವರು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಈ ಬಾರಿಯ ದತ್ತಿ ಪ್ರಶಸ್ತಿಗೆ ಭಾಜನರಾದ ಡಾ. ಎಸ್.ಎಫ್. ಜಕಬಾಳ ಅವರ ಜನಪದ ಸಾಹಿತ್ಯ ಪ್ರಸಾರ ಹಾಗೂ ಪೋಷಣೆಯ ಹಿನ್ನೆಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜಾಪುರ ಜಿಲ್ಲೆಯ ಆಲಮೇಲ್ ತಾಲೂಕಿನಲ್ಲಿ ನಡೆಯುವ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ.ಎಚ್. ಶಾಸ್ತ್ರಿ(ಕಡಣಿ) ಹಾಗೂ ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘದ ಅಧ್ಯಕ್ಷ ಜಗದೀಶ ಪೂಜಾರ ಇವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಲಲಿತಾಕೆರಿಮನಿ ಉಪಸ್ಥಿತರಿದ್ದರು.

ಶಾಂತಲಾ ಹಂಚಿನಾಳ ಪ್ರಾರ್ಥಿಸಿದರು. ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ ಕೆರಿಮನಿ ವಂದಿಸಿದರು.

ಕಾರ್ಯಕ್ರಮದಲ್ಲಿ ಚಂಬಣ್ಣ ಬಾಳಿಕಾಯಿ, ರಮೇಶ ನವಲೆ, ಎಸ್.ಎಫ್. ಆದಿ, ಕೊತ್ತಲ ಮಹದೇವಪ್ಪ, ಸುರೇಶ ರಾಜನಾಯ್ಕರ, ಜೆ.ಎಸ್. ರಾಮಶೆಟ್ರ, ಗಂಗಾಧರ ಅರಳಿ, ಬಿ.ಎಸ್. ಬಾಳೇಶ್ವರಮಠ, ಸಿ.ಎಂ. ಕಗ್ಗಲಗೌಡ್ರ, ಡಾ. ಎಸ್.ಎಸ್. ವೆಂಕಟಾಪುರ, ಎಸ್.ಎಸ್. ಸೂಳಿಕೇರಿ, ಸಿ.ಎಂ. ಮಾರನಬಸರಿ, ಜಯದೇವ ಮೆಣಸಗಿ, ಶಿಲ್ಪಾ ಮ್ಯಾಗೇರಿ, ಪ್ರತಿಮಾ ಮಹಾಜನಶೆಟ್ಟರ, ಜಯಶ್ರೀ ಮೆಳ್ಳಿಗೇರಿ, ಅಕ್ಕಮಹಾದೇವಿ ಮಳಲಿ, ಮಾಲಾದೇವಿ ದಂದರಗಿ, ನಿರ್ಮಲಾ ಅಡವಿ, ಮಹಾನಂದಾ ಕೊಣ್ಣೂರ, ನಂದಾ ಧರ್ಮಾಯತ, ಅಶ್ವಿನಿ ಅಂಕಲಕೋಟಿ, ಮಂಜುಳಾ ವೆಂಕಟೇಶಯ್ಯ, ಅನಿತಾ ಜಕಬಾಳ, ಶೈಲಜಾ ಗಿಡ್ನಂದಿ, ಉಮಾ  ಪಾಟೀಲ, ಶಶಿಕಾಂತ ಕೊರ್ಲಹಳ್ಳಿ, ಬಸವರಾಜ ಗಣಪ್ಪನವರ ಮುಂತಾದವರು ಭಾಗವಹಿಸಿದ್ದರು.

ಡಾ. ದತ್ತಪ್ರಸನ್ನ ಪಾಟೀಲ ಡಾ.ಸಿದ್ದಣ್ಣ ಜಕಬಾಳರ ಕುರಿತು ಅಭಿನಂದನಾ ನುಡಿಗಳನ್ನಾಡಿ, ಜನಪದ ಕಲಾ ಪ್ರಕಾರಗಳನ್ನು ಇಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. 17 ಕ್ಕೂ ಅಧಿಕ ಪುಸ್ತಕಗಳನ್ನು ನೂರಾರು ಲೇಖನಗಳನ್ನು ಬರೆದು ರಾಷ್ಟ್ರ ಹಾಗೂ ರಾಜ್ಯಮಟ್ಟದ ಅನೇಕ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ನವೀನ ವಿಚಾರಗಳನ್ನು ಮಂಡಿಸಿದ್ದಾರೆಂದು ತಿಳಿಸಿದರು.              


Spread the love

LEAVE A REPLY

Please enter your comment!
Please enter your name here