ಪರಿಹಾರ ಹಣ ಜಮಾ ಆಗದಿರುವವರು ದಾಖಲೆಗಳನ್ನು ಮರುಪರಿಶೀಲಿಸಿ

0
For those who have not received compensation
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಬೆಳೆ ಹಾನಿ, ಬೆಳೆ ಪರಿಹಾರ ಜಮೆ ಅಗದೇ ಇರುವ ರೈತರು ತಾವು ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ, ಖಾತೆ ಚಾಲ್ತಿ ಇರುವ ಬಗ್ಗೆ, ಕೆವೈಸಿ ಅಪ್‌ಡೇಟ್ ಆಗಿರುವ ಬಗ್ಗೆ ಮತ್ತು ಪ್ರೂಟ್ಸ್ ಸಂಖ್ಯೆ ಹೊಂದಿರುವ ಬಗ್ಗೆ ಪರಿಶೀಲಿಸಿ, ಖಾತರಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಕೌಂಟ್‌ಗಳನ್ನು ನಿರ್ಬಂಧಿಸಿರುವುದು ಅಥವಾ ಫ್ರೀಜ್ ಮಾಡಿರುವುದು ಹಾಗೂ ಯಾವ ರೈತರ ಖಾತೆಯನ್ನು ಮುಚ್ಚಲಾಗಿದೆಯೋ ಅಂತಹ ಫಲಾನುಭವಿಗಳು ಬ್ಯಾಂಕ್‌ಗೆ ಹೋಗಿ ಅಕೌಂಟ್ ರಿ ಓಪನ್ ಮಾಡಿಸಬೇಕು. ಫ್ರೂಟ್ಸ್ ಅಪ್‌ಡೇಟ್‌ನಲ್ಲಿ ಆಧಾರ್ ಹೆಸರು ಹೊಂದಿಕೆಯಾಗುತ್ತಿಲ್ಲದ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ಅಪ್‌ಡೇಟ್ ಮಾಡಿಸಬೇಕು. ಆಧಾರ್ ಅನ್ನು ಬ್ಯಾಂಕ್‌ನೊಂದಿಗೆ ಸೀಡ್, ಖಾತೆಗೆ ಆಧಾರ್ ಮ್ಯಾಪ್, ಕುಸಿದ ಪಾವತಿ ಹಾಗೂ ಎನ್.ಪಿ.ಸಿ.ಐ ಸೀಡಿಂಗ್ ಸಮಸ್ಯೆ ಇರುವ ಫಲಾನುಭವಿಗಳು ಬ್ಯಾಂಕ್‌ಗೆ ಹೋಗಿ ಎನ್.ಪಿ.ಸಿ.ಐ (NPCI) ಮಾಡಿಸಬೇಕು ಎಂದು ತಿಳಿಸಿದ್ದಾರೆ.

ಅಮಾನ್ಯ ಸ್ವೀಕೃತ ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಫಲಾನುಭವಿಗಳು ಬ್ಯಾಂಕ್‌ಗೆ ಹೋಗಿ ಐ.ಎಫ್.ಎಸ್.ಸಿ ಕೋಡ್ ಅಪ್‌ಡೇಟ್ ಮಾಡಿಸಿ ಎನ್.ಪಿ.ಸಿ.ಐ ಮಾಡಿಸಬೇಕು. ಹೆಚ್ಚಿನ ವಿವರ, ಮಾಹಿತಿ ಅಗತ್ಯವಿದ್ದಲ್ಲಿ ರೈತರು ಆಯಾ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ತೆರೆದಿರುವ ಬರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಅಥವಾ ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here