ಬೆಂಗಳೂರು: ಸಿಂಥೆಟಿಕ್ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಚಿಕೋಜ಼ಿ ಹೇಡಾಹಾ ಬಂಧಿತ ಆರೋಪಿಯಾಗಿದ್ದು,
Advertisement
ಬಾಗಲೂರು ಠಾಣಾ ವ್ಯಾಪ್ತಿಯ ಕಾಲೇಜು ಯುವಕ ಯುವತಿಯರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಪಾಸ್ ಪೋರ್ಟ್ ವೀಸಾ ಇಲ್ಲದೆ ಆಕ್ರಮವಾಗಿ ವಾಸ ಮಾಡುತಿದ್ದ ಆರೋಪಿಯು ಬೇರೊಬ್ಬ ಪೆಡ್ಲರ್ ನಿಂದ ಡ್ರಗ್ಸ್ ಪಡೆದು ಬೆಂಗಳೂರು ಹೊರವಲಯದ ಕಾಲೇಜುಗಳಲ್ಲಿ ಮಾರಾಟ ಮಾಡುತಿದ್ದನು.
ಸದ್ಯ ಆರೋಪಿ ಚಿಕೋಜ಼ಿ ಹೇಡಾಹಾ ಬಂಧಿಸಿ 2.30 ಕೋಟಿ ಮೌಲ್ಯದ 2.36 ಕೆಜಿ ಎಂಡಿಎಂಎ ವಶಕ್ಕೆ ಪಡೆಯಲಾಗಿದ್ದು, ಬಾಗಲೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.