ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪ್ರತಿಷ್ಠಿತ ಆ್ಯಂಗ್ಲೋ ಉರ್ದು ಬಾಲಕಿಯರ ಪ್ರೌಢಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತನ್ನು ಚುನಾವಣೆಯ ಮೂಲಕ ರಚಿಸಲಾಗಿದೆ.
ಶಾಲಾ ಪ್ರಧಾನ ಮಂತ್ರಿಯಾಗಿ ಕುಮಾರಿ ಮೆಹಕ್ ಕಲೆಗಾರ, ವಿರೋಧ ಪಕ್ಷದ ನಾಯಕಿಯಾಗಿ ಕುಮಾರಿ ಮುಬೀನ್ ಬೇಲೇರಿ, ಸಂಸತ್ ಅಧ್ಯಕ್ಷೆಯಾಗಿ ಕುಮಾರಿ ಆಸ್ಮಾ ಡೋಣಿ, ಶಿಕ್ಷಣ ಸಚಿವೆಯಾಗಿ ಕುಮಾರಿ ರಿಫತ್ ನದಾಫ್, ಆರೋಗ್ಯ ಸಚಿವೆಯಾಗಿ ಕುಮಾರಿ ತಯ್ಯಬಾ ಕಾತರಕಿ, ಪ್ರವಾಸೋದ್ಯಮ ಸಚಿವೆಯಾಗಿ ಕುಮಾರಿ ರೆಹಾನ್ ಗಂಧದ, ಗ್ರಂಥಾಲಯ ಸಚಿವೆಯಾಗಿ ಕುಮಾರಿ ಇನ್ಷಾ ಬೇಪಾರಿ ಹಾಗೂ ಆಹಾರ ಸಚಿವೆಯಾಗಿ ಕುಮಾರಿ ಮೆಹರ್ ಬಾಗೋಡಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಶಾಲಾ ಸಂಸತ್ ಪದಾಧಿಕಾರಿಗಳನ್ನು ಮುಖ್ಯೋಪಾಧ್ಯಾಯ ಎಲ್.ಆರ್. ಇಟಗಿ, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.



