ವಿಜಯಸಾಕ್ಷಿ ಸುದ್ದಿ, ನರೇಗಲ್ : ಸಮೀಪದ ಕುರುಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನೂತನ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶಿಡ್ಲಪ್ಪ ಪೂಜಾರ, ಉಪಾಧ್ಯಕ್ಷರಾಗಿ ವಿದ್ಯಾ ಜಾಧವ, ಸದ್ಯಸ್ಯರಾಗಿ ಶಿವಯ್ಯ ಪೂಜಾರ, ಗಂಗಾಧರ ಅಂಗಡಿ, ಮಲ್ಲನಗೌಡ ಅಯ್ಯನಗೌಡ್ರ, ದೇವೇಂದ್ರ ಮಾದರ, ಜೀವನಸಾಬ ಚೋಪದಾರ, ರಾಜು ಜಾಧವ, ಶರಣಯ್ಯ ವಸ್ತçದ, ಯಲ್ಲಪ್ಪ ತೊಂಡಿಹಾಳ, ಸುನಂದಾ ಸವಡಿ, ಲಕ್ಷ್ಮಿ ರಾಮಣ್ಣವರ, ವೀರವ್ವ ಕುರಿ, ಮಂಜುಳಾ ಹಿರೇಗೌಡ್ರ, ಬಸಮ್ಮ ಹೊಸಮನಿ, ನೀಲವ್ವ ದೊಡ್ಡಮನಿ, ಶಂಶಾದ್‌ಬೇಗಂ ನದಾಫ್, ಗಿರಿಜವ್ವ ಅಸುಂಡಿ ಅವಿರೋಧವಾಗಿ ಆಯ್ಕೆಯಾದರು.
18 ಜನ ಪಾಲಕ ಪ್ರತಿನಿಧಿಗಳಾಗಿ, 3 ಜನ ಪದನಿಮಿತ್ತ ಸದಸ್ಯರಾಗಿ, 3 ಜನ ನಾಮ ನಿರ್ದೇಶಕ ಸದಸ್ಯರಾಗಿ ಸರ್ವಸಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಗುರುಮಾತೆ ರೇಣುಕಾ ಗಡಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಆರ್‌ಪಿ ಈರಣ್ಣ ಎಸ್.ಮಾದರ, ಅಬ್ಬಿಗೇರಿ ಸಿಆರ್‌ಪಿ ಎಸ್.ಆರ್. ಮೂಲಿಮನಿ, ಗ್ರಾ.ಪಂ ಅಧ್ಯಕ್ಷ ವೀರಪ್ಪ ರಾಮಣ್ಣವರ, ಪಿಡಿಒ ಶಿಲ್ಪಾ ಕವಲೂರ, ಸದಸ್ಯರಾದ ಶೌಕತ್‌ಅಲಿ ನದಾಫ್, ಪವಿತ್ರಾ ಕುರಿ, ಜಯಲಕ್ಷ್ಮಿ ವಾಲ್ಮೀಕಿ, ಗಂಗವ್ವ ಪೂಜಾರ, ಗ್ರಾಮದ ಹಿರಿಯರಾದ ಮಲ್ಲಯ್ಯ ವಸ್ತçದ, ವೀರಣ್ಣ ಸವಡಿ, ಯಲ್ಲಪ್ಪ ಕುರಿಯವರ, ಶಿವಪ್ಪ ತೊಂಡಿಹಾಳ, ವಸಂತ ರಾಮಣ್ಣವರ, ರಮೇಶ ಜಾಧವ, ವೀರಪ್ಪ ಕಾಡರ, ಮಹಬೂಬ ಮುಳಗುಂದ ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಶಿಕ್ಷಕ ಓ.ಪೂರ್ಣಯ್ಯ ನಿರೂಪಿಸಿ ವಂದಿಸಿದರು.