ವಿಜಯಸಾಕ್ಷಿ ಸುದ್ದಿ, ದಾವಣಗೆರೆ : ಜಗಳೂರು ತಾಲೂಕು ಸುಕ್ಷೇತ್ರ ಕೊಡದಗುಡ್ಡದಲ್ಲಿ ಶ್ರೀ ರಂಭಾಪುರಿ-ಶ್ರೀ ಕೇದಾರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ವೀರಭದ್ರಸ್ವಾಮಿ ವಸತಿಗೃಹ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪದ ಶಂಕುಸ್ಥಾಪನೆ, ದೇವಿಕೆರೆ ಗ್ರಾಮದಲ್ಲಿನ ಮಹಾದ್ವಾರ ಉದ್ಘಾಟನೆಯ ಅಂಗವಾಗಿ ಮಾ.14ರಂದು ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಂಸ್ಕೃತಿ ಜಾಗೃತಿ ಧರ್ಮ ಸಮಾರಂಭ ಜರುಗುವುದು.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಶ್ರೀ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗುವ ಸಮಾರಂಭದಲ್ಲಿ ರಾಮಘಟ್ಟ ಪುರವರ್ಗ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು, ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹಾಗೂ ಶಿರಾಳಕೊಪ್ಪ ವಿರಕ್ತಮಠದ ಸಿದ್ಧೇಶ್ವರ ದೇವರು ನೇತೃತ್ವ ವಹಿಸವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಭೂವಿಜ್ಞಾನ-ತೋಟಗಾರಿಕೆ ಖಾತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ದೇವೀಕೆರೆ ಜೆ.ಆರ್. ರವಿಚಂದ್ರ, ದಾವಣಗೆರೆಯ ಬಿ.ಸಿ. ಉಮಾಪತಿ, ಎಸ್.ಕೆ. ಶಶಿಧರ, ಕೊಗುಂಡಿ ಬಕ್ಕೇಶಪ್ಪ, ದೇವರಮನೆ ಶಿವಕುಮಾರ, ಚಿದಾನಂದಪ್ಪ, ಹೆಚ್.ಬಿ. ಮಂಜಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು. ಕೊಡದಗುಡ್ಡ ಶ್ರೀ ವೀರಭದ್ರಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.