ಪ್ರತಿಯೊಬ್ಬರೂ ಸಂಸ್ಕಾರ ಹೊಂದುವುದು ಮುಖ್ಯ : ಸಿದ್ದರಾಮ ಶ್ರೀಗಳು

0
Free blood donation camp and religious building inauguration program
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಜಗತ್ತಿಗೆ ಮಾನವೀಯತೆಯ ಬೆಳಕು ಪಸರಿಸಿ ವಿಶ್ವದ ಜನತೆಗೆ ಸುಖ, ಶಾಂತಿ, ಸಮೃದ್ಧಿ ನೀಡಲಿ ಎಂದು ಸಾರಿದ್ದ ಪ್ರವಾದಿ ಮುಹಮ್ಮದ ಪೈಗಂಬರರು ವಿಶ್ವಕ್ಕೆ ಶಾಂತಿ, ಸನ್ಮಾರ್ಗ ತೋರಿದ್ದಾರೆ ಎಂದು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

Advertisement

ಡಂಬಳ ಗ್ರಾಮದ ಜಾಮಿಯಾ ಮಸೀದಿಯ ಆವರಣದಲ್ಲಿ ಮುಹಮ್ಮದ ಪೈಗಂಬರರ ಜಯಂತಿಯ ಅಂಗವಾಗಿ ಅಂಜುಮನ್-ಎ-ಇಸ್ಲಾಂ ಕಮಿಟಿ ಯುವಕರು ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಗದಗ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರ ಹಾಗೂ ಧಾರ್ಮಿಕ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪ್ರತಿಯೊಂದು ಧಾರ್ಮಿಕ ವ್ಯವಸ್ಥೆಯಲ್ಲಿ ಸಂಸ್ಕಾರ ಹೊಂದುವುದು ಬಹಳ ಮುಖ್ಯ. ಆ ಹಿನ್ನೆಲೆಯಲ್ಲಿ ಬಸವಾದಿ ಶಿವ ಶರಣರು, ಪೈಗಂಬರರು ಸೇರಿದಂತೆ ಹಲವಾರು ಶರಣರು ಉತ್ತಮ ಸಂಸ್ಕಾರದ ಬದುಕನ್ನು ಕಟ್ಟಿಕೊಳ್ಳುವಂತೆ ಸಾರಿದರು ಎಂದು ಹೇಳಿದರು.

ಬೆಳಗಟ್ಟಿಯ ಸೈಯದ್‌ಷಾ ಮುಸ್ತಾಫಾ ಖಾದ್ರಿ ಅವರು ಮಾತನಾಡಿ, ಮುಹಮ್ಮದ ಪೈಗಂಬರರ ಸಮಗ್ರ ಬೋಧನೆಗಳ ಕೇಂದ್ರ ಬಿಂದು ಮಾನವ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಬದಲಾಗಿ ಪ್ರತಿಯೊಬ್ಬರೂ ಶ್ರೇಷ್ಠರೇ ಎಂದು ಹೇಳಿದರು.

ಖಾದರಸಾಬ ಮುಲ್ಲಾ, ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿದರು. ಪೈಗಂಬರರ ಕುರಿತು ಇಬ್ರಾಹಿಂ ಬಾತಿಷ ಶಂಸಿ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಜುಮ್ಮಾ ಮಸೀದಿಯಿಂದ ಹೊರಟ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. 30ಕ್ಕೂ ಹೆಚ್ಚು ಯುವಕರು ರಕ್ತದಾನವನ್ನು ಮಾಡಿದರು. ನಿವೃತ್ತಿ ಹೊಂದಿದ ಪೊಲೀಸರನ್ನು, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉರ್ದು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬಶೀರಹಮ್ಮದ ತಾಂಬೋಟಿ, ವಿ.ಎಸ್. ಯರಾಶಿ, ಸಿದ್ದಪ್ಪ ನಂಜಪ್ಪನವರ, ಮರಿತೆಮಪ್ಪ ಆದಮ್ಮನವರ, ಯುಸುಫ್ ಈಟಿ, ಮರಿಯಪ್ಪ ಸಿದ್ದಣ್ಣವರ, ಮಲ್ಲಪ್ಪ ಮಠದ, ಆರ್.ಜಿ. ಕೊರ್ಲಹಳ್ಳಿ, ಉಪತಹಸೀಲ್ದಾರ ಸಿ.ಕೆ. ಬೆಳವಟಗಿ, ಸಿಪಿಐ ಮಂಜುನಾಥ ಕುಸುಗಲ್ಲ, ಖಾಜಾಹುಸೇನ ಹೋಸಪೇಟಿ, ಬುಡ್ನೆಸಾಬ ಅತ್ತಾರ, ಹುಸೇನ ದೊಡ್ಡಮನಿ, ರಾಜಾಭಕ್ಷಿ ಡಾಲಾಯತ, ಆಶೀಫ್ ತಾಂಬೋಟಿ, ಇಸ್ಮಾಯಿಲ್ ಹೋಸಪೇಟಿ, ಇಜಾಜ ಮುಲ್ಲಾ, ಹುಸೇನಸಾಬ ಮೂಲಿಮನಿ, ಜಾಕೀರ ಮೂಲಿಮನಿ, ಹಮೀದ ಸರಕಾವಾಸ, ಬಾಬು ಸರಕಾವಾಸ, ಜಂದಿಸಾಬ ತಾಂಬೋಟಿ, ಮುರ್ತುಜಾ ಮನಿಯಾರ, ಗೌಸುಸಾಬ ಆಲೂರ, ಶಫೀಕ ಮೂಲಿಮನಿ, 1995-96ನೇಸಾಲಿನ ಹೈಸ್ಕೂಲ್‌ಗೆಳೆಯರಬಳಗ, ಸಮಿತಿಯ ಸದಸ್ಯರು, ಹಿರಿಯರು, ಮಹಿಳೆಯರು, ಇದ್ದರು.

ಅರಭಿಯಾದ ಮರುಭೂಮಿಯಲ್ಲಿ ಆಧ್ಯಾತ್ಮಿಕ ಸಾಮಾಜಿಕ ಮಾನವಿಯ ಭಾವೈಕ್ಯತೆಯ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸಿದ ಪೈಗಂಬರರ ಬದುಕು ತೆರೆದ ಗ್ರಂಥವಾಗಿದೆ. ಭಾಷೆ, ವರ್ಗ, ಲಿಂಗ, ಕಪ್ಪು-ಬಿಳುಪು ಎನ್ನುವ ಬೇಧವಿಲ್ಲದೆ ಪ್ರತಿಯೊಬ್ಬ ಮಾನವನೂ ಉತ್ತಮ ಜೀವನ ನಡೆಸಬೇಕು ಎನ್ನುವ ಅವರ ಸಂದೇಶಗಳನ್ನು ಪಾಲಿಸಿ. ರಕ್ತವನ್ನು ಸೃಷ್ಟಿಸಲು ಕಾರ್ಖಾನೆಯಿಲ್ಲ. ಆದರೆ ಮನುಷ್ಯ ರಕ್ತ ದಾನ ಮಾಡಿದಾಗ ತೊಂದರೆಯಲ್ಲಿರುವವರನ್ನು ಬದುಕಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪೈಗಂಬರರ ಜಯಂತಿಯಂದು ಶ್ರಮಿಸುತ್ತಿರುವುದು ಪ್ರಶಂಸನೀಯ.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.


Spread the love

LEAVE A REPLY

Please enter your comment!
Please enter your name here