ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ದೇಹದಲ್ಲಿ ರಕ್ತ ಚಲನೆ ಸರಾಗವಾಗಿ ನಡೆಯಲು ಪಲ್ಸ್ ಥೆರಪಿ ಚಿಕಿತ್ಸೆಯು ಪರಿಣಾಮಕರಿಯಾಗಿದೆ ಎಂದು ಹರಪನಹಳ್ಳಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್ ತಿಳಿಸಿದರು.
ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯಾಲಯದಲ್ಲಿ ತಾಲೂಕು ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ದಾವಣಗೆರೆ ಕಂಪಾನಿಯೋ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಫೂಟ್ ಪಲ್ಸ್ ಥೆರಪಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಮಾತ್ರ ತಮ್ಮ ಇಷ್ಟಾರ್ಥಗಳನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯ. ಮನುಷ್ಯನ ದೇಹದಲ್ಲಿ ಯಾವುದೇ ರೋಗಗಳು ಬಾರದಂತೆ, ರಕ್ತ ಸರಾಗವಾಗಿ ಚಲನೆಯಾಗಲು ಫೂಟ್ ಪಲ್ಸ್ ಥೆರಪಿಯನ್ನು ಮಾಡಿಸಿಕೊಳ್ಳುವುದು ಉತ್ತಮ ಎಂದರು.
ತಾಲೂಕು ದೈಹಿಕ ಪರಿವೀಕ್ಷಕ ಷಣ್ಮುಖಪ್ಪ ಮಾತನಾಡಿ, ಮನುಷ್ಯನು ಜಾಗತಿಕವಾಗಿ ವಿಜ್ಞಾನದಿಂದ ವೇಗವಾಗಿ ಓಡುತ್ತಿದ್ದಾನೆ. ಆದರೆ ಅತಿಯಾದ ತಂತ್ರಜ್ಞಾನ ಬಳಕೆಯಿಂದ ಮನುಷ್ಯನ ಆಯುಷ್ಯ ಸಹಜವಾಗಿ ಕುಂಠಿತವಾಗುತ್ತಿದೆ. ಇಂದಿನ ಆಹಾರ ಪದ್ಧತಿಯು ಕೇವಲ ನಾಲಿಗೆಯ ರುಚಿಗೆ ಮಾತ್ರ ಸೀಮಿತವಾಗಿದೆ.
ಸತ್ವವುಳ್ಳ ಆಹಾರ ಸೇವಿಸಿದರೆ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯವೆಂದು ತಿಳಿಸಿದರು.