ಇಂದಿನಿಂದ “ಗ್ರೇಟರ್‌ ಬೆಂಗಳೂರು” ಆಗಿ ಬದಲಾಗಿದೆ ಬೃಹತ್ Bangalore: ಬಿಬಿಎಂಪಿ ಯುಗಾಂತ್ಯ

0
Spread the love

ಬೆಂಗಳೂರು: ಬೆಂಗಳೂರಲ್ಲಿ ಸುಮಾರು ಏಳು ಪಾಲಿಕೆಗಳನ್ನು ರಚಿಸಲು ಅವಕಾಶ ನೀಡುವ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಇಂದಿನಿಂದ ಜಾರಿಗೆ ಬರಲಿದೆ. ನಿನ್ನೆವರೆಗೂ ಇದ್ದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವ ಕಳೆದುಕೊಂಡಿದೆ. ನಿನ್ನೆಗೆ ಬಿಬಿಎಂಪಿ ಮುಕ್ತಾಯವಾಗಿದೆ. ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ.

Advertisement

ಸದ್ಯ ಬಿಬಿಎಂಪಿ ವಿಸರ್ಜನೆಯಾಗಿದ್ದು, 3 ಭಾಗಗಳಾಗಿ ಬೆಂಗಳೂರು ವಿಂಗಡಣೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಸೇರಿ ಮೂರು ಭಾಗಗಳಾಗಿ ವಿಂಗಡಣೆ ಮಾಡಲು ಚಿಂತನೆ ಮಾಡಲಾಗುತ್ತಿದೆ. ಪ್ರತೀ ಪಾಲಿಕೆಯಲ್ಲೂ‌125 ವಾರ್ಡ್ ಗಳು ಇರಲಿವೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ – 2024ರ ಕಲಂ 1(2)ರ ಕಲಂ 3ರಂತೆ ಬಿಬಿಎಂಪಿ ಪ್ರದೇಶವನ್ನು ಗ್ರೇಟರ್‌ ಬೆಂಗಳೂರು ಪ್ರದೇಶವೆಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೇ ಈ ಗ್ರೇಟರ್ ಬೆಂಗಳೂರು ಬಡಜನರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ – 2024ರ ಅನುಸಾರದಲ್ಲಿ ಆಡಳಿತಕ್ಕೆ ಬರಲಿದೆ. ಮುಖ್ಯಮಂತ್ರಿ ನೇತೃತ್ವದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು 120 ದಿನಗಳಲ್ಲಿ ರಚನೆಯಾಗಬೇಕಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ)ಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಅಭಿವೃದ್ಧಿ ಸಚಿವರೇ ಜಿಬಿಎ ನ ಉಪಾಧ್ಯಕ್ಷರಾಗಿರುತ್ತಾರೆ.  ಮೂರು ನಗರ ಪಾಲಿಕೆಗಳು ತಲಾ 125 ವಾರ್ಡ್‌ಗಳನ್ನು ಒಳಗೊಂಡಿರುತ್ತದೆ. ಪ್ರತಿ ಪಾಲಿಕೆಗೂ ‘ಗ್ರೇಟರ್ ಬೆಂಗಳೂರು ಪ್ರದೇಶ’ದ ಗಡಿ ನಿಗಧಿಪಡಿಸಲಾಗುತ್ತದೆ.

 


Spread the love

LEAVE A REPLY

Please enter your comment!
Please enter your name here