HomeGadag Newsಜಿ.ಎಸ್. ಪಾಟೀಲ ಅಪರೂಪದ ರಾಜಕಾರಣಿ

ಜಿ.ಎಸ್. ಪಾಟೀಲ ಅಪರೂಪದ ರಾಜಕಾರಣಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಕ್ಷೇತ್ರದ ಅಭಿವೃದ್ಧಿಯೆಡೆ ಚಿಂತನೆ, ಸದಾ ಜನಸಾಮಾನ್ಯರೊಂದಿಗೆ ಬೆರತು ಜನಸ್ನೇಹಿ ಆಡಳಿತ ನೀಡುವ ಮೂಲಕ ಶಾಸಕ ಜಿ.ಎಸ್. ಪಾಟೀಲ ಅಪರೂಪದ ರಾಜಕಾರಣಿಯಾಗಿದ್ದಾರೆ. ಬದುಕಿನುದ್ದಕ್ಕೂ ಜನಪರ ಕಾಳಜಿ ಇರಿಸಿಕೊಂಡು ಅದರಲ್ಲಿಯೇ ಸಂತೃಪ್ತಿ ಕಂಡ ಅವರು ನಮ್ಮಂತಹ ಯುವ ರಾಜಕಾಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಯರಾಶಿ ಅಭಿಪ್ರಾಯಪಟ್ಟರು.

ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರ 78ನೇ ಜನ್ಮದಿನದ ಅಂಗವಾಗಿ ಬುಧವಾರ ಅವರ ಅಭಿಮಾನಿಗಳು ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸಸಿ ನೆಡುವ ಹಾಗೂ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

78ನೇ ವರ್ಷದ ಹುಟ್ಟುಹಬ್ಬ ಅವರ ಸಾರ್ಥಕ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಸದಾ ಜನರ ಪರವಾಗಿ ಚಿಂತಿಸುವ, ಈ ಭಾಗದಲ್ಲಿ ಜನಸಾಮಾನ್ಯರ ಜನನಾಯಕರಾಗಿ ಹೆಸರುವಾಗಿರುವ ಅವರ ಹುಟ್ಟುಹಬ್ಬವನ್ನು ದುಂದುವೆಚ್ಚ ಮಾಡದೆ ಸಸಿ ನೆಡುವುದು ಹಾಗೂ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅತ್ಯಂತ ಸಾರ್ಥಕ ಕಾರ್ಯವಾಗಿದೆ ಎಂದರು.

ಎಸ್.ಸಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮರಿಯಪ್ಪ ಸಿದ್ದಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಸಾವಿರ ಕೆರೆಗಳ ಸರದಾರ, ಬಡವರ ದೀನ-ದಲಿತರ, ನೊಂದವರ ಪರವಾಗಿ ಸದಾ ಚಿಂತನೆ ಮಾಡುವ ಮೂಲಕ ಕ್ಷೇತ್ರದ ಸಮಗೃ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ ಗಡಗಿ, ಮುತ್ತಣ್ ಕೊಂತಿಕಲ್, ಬಸವರಡ್ಡಿ ಬಂಡಿಹಾಳ, ಜಾಕೀರ ಮೂಲಿಮನಿ, ಬುಡ್ನೆಸಾಬ ಅತ್ತಾರ, ಕುಬೇರಪ್ಪ ಕೊಳ್ಳಾರ, ಶರಣು ಬಂಡಿಹಾಳ, ಉರ್ದುಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಜೆ. ಕಾಸ್ತಾರ, ಬಾಬುಸಾಬ್ ಸರ್ಕವಾಸ, ಬಾಬುಸಾಬ್ ಮೂಲಿಮನಿ, ನಾಗೇಶ ಧರ್ಮಾಧಿಕಾರಿ, ಅಹ್ಮದ ಸರ್ಕವಾಸ, ಶಂಕ್ರಪ್ಪ ಗಡಗಿ, ಬಸವರಾಜ ಶಿರೂಳ, ಮಲ್ಲಿಕಾರ್ಜುನ ಪ್ಯಾಟಿ, ಸುರೇಶ ಗಡಗಿ, ಫಕ್ಕೀರಪ್ಪ ಆದಮ್ಮನವರ, ಶರಣಪ್ಪ ಪ್ಯಾಟಿ, ಯಂಕಣ್ಣ ಗಡಗಿ, ಶರಣು ಬಂಡಿಹಾಳ, ಮಹೇಶ ಗುಡ್ಡದ, ಮಹೇಶ ಬಿಸನಹಳ್ಳಿ, ಮಂಜುನಾಥ ತಳವಾರ, ಬಾಲಚಂದ್ರ ಸಿದ್ದಣ್ಣವರ, ಆದಿತ್ಯ ಗದಗಿನ, ಹುಸೇನ ದೊಡ್ಡಮನಿ, ಮಳ್ಳಪ್ಪ ಒಂಟೆಲಭೋವಿ, ಮಂಜುನಾಥ ನರಗುಂದ, ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು, ಸಹ ಶಿಕ್ಷಕರು ಭಾಗವಹಿಸಿದ್ದರು.

ಯುವನೇತಾರ ಬಸವರಡ್ಡಿ ಬಂಡಿಹಾಳ ಮಾತನಾಡಿ, ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿವೆ. ಬರದ ನಾಡೆಂದೇ ಬಿಂಬಿತವಾಗಿದ್ದ ಈ ಭಾಗದಲ್ಲಿ ಗುಳೆ ಹೋಗುತ್ತಿದ್ದ ಜನರ ನೋವು ಅರಿತು ಎಲ್ಲಾ ಕೆರೆ, ಹಳ್ಳಕೊಳ್ಳಗಳನ್ನು ತುಂಬಿಸುವ ಮೂಲಕ ಜಿ.ಎಸ್. ಪಾಟೀಲರು ಈ ಭಾಗದ ಭಗೀರಥರಾಗಿದ್ದಾರೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!