ವಿಜಯಸಾಕ್ಷಿ ಸುದ್ದಿ, ಗದಗ : ಲಿಂಗ ಪೂಜೆ ಮಾಡುವ ಕೈಗಳಿಗಿಂತ ಕೆಲಸ ಮಾಡುವ ಕೈಗಳೇ ಶ್ರೇಷ್ಠ. ಅದಕ್ಕಾಗಿಯೇ ಬಸವಣ್ಣನವರು `ಕಾಯಕವೇ ಕೈಲಾಸ’ ಎಂದು ಸಾರಿರುವುದಾಗಿ ಮ.ನಿ.ಪ್ರ ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ನುಡಿದರು.
ಎ.ಐ.ಟಿ.ಯು.ಸಿ. ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಗದಗ ಜಿಲ್ಲಾ 2ನೇ ಸಮ್ಮೇಳನ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಈಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕಾರ್ಮಿಕರೆಲ್ಲ ಒಂದಾಗಿ ಸಂಘಟನೆಗಳನ್ನು ಬಲಗೊಡಿಸಲು ಕರೆ ನೀಡಿದರು.
ಕಾಂ.ಸಿದ್ದನಗೌಡ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐಕ್ಯತೆಯಿಂದ ಹೋರಾಡಲು ಎ.ಐ.ಟಿ.ಯು.ಸಿ ನಿಮಗೆ ಅವಕಾಶ ಮಾಡಿಕೊಟ್ಟಿದೆ. ಕಾರ್ಮಿಕರೆಲ್ಲರೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಕಾಂ. ಅಮಜಾದ, ಕಾಂ. ಗಿರೀಶ ತುಮಕೂರು, ಕಾಂ. ಎ.ಎಸ್. ಜನಾರ್ಧನ, ಕಾಂ. ಹೊನ್ನಪ್ಪ ಮರಿಯಮ್ಮನವರ, ಕಾಂ. ರಾಘವೇಂದ್ರ ನಾಯರಿ, ಕಾಂ. ಎ.ಎಸ್. ಪೀರಜಾದೆ, ಕಾಂ. ಎಲ್.ತಿಮ್ಮಣ್ಣ, ಬತ್ತೂಲ್ ಕಿಲ್ಲೇದಾರ, ಕಾಂ. ಎಂ.ಐ. ನವಲೂರು, ಅಡಿವೆಪ್ಪ ಚಲವಾದಿ, ಈಶ್ವರ ಲಕ್ಷ್ಮೇಶ್ವರ , ಈರಣ ಶಿವಶಿಂಪಿಗೇರ, ನಜೀರ ಶಿರಹಟ್ಟಿ, ವಜೀರ ಬನ್ನೂರ ಮುಂತಾದವರು ಉಪಸ್ಥಿತರಿದ್ದರು.
ಬಸವರಾಜ ದೇ.ಅರಮನಿ ಸ್ವಾಗತಿಸಿದರು. ಗವಿಸಿದ್ದಯ್ಯ ಹಳ್ಳಿಕೇರಿಮಠ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಭಾರತೀಯ ಜನ ಕಲಾ (ಇಪ್ತಾ) ಕಲಾವಿದ ಷಣ್ಮುಖಸ್ವಾಮಿ ಕ್ರಾಂತಿಗೀತೆ ಹಾಡಿದರು.