ಗುಣಮಟ್ಟದ ಕಾಮಗಾರಿಗೆ ಮುಂದಾಗಿ : ವಿ.ಶ್ರೀಶಾನಂದ್

0
Gadag District Administrative Justice V. Sreeshanand
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಕಾಲಕಾಲೇಶ್ವರ ಮಾರ್ಗ ಮಧ್ಯೆ ಪುರಸಭೆ ಪಂಪ್‌ಹೌಸ್ ಹತ್ತಿರದಲ್ಲಿ ಸರ್ಕಾರ ನಿಗದಿಪಡಿಸಿದ ಸ್ಥಳದಲ್ಲಿ 9.80 ಕೋಟಿ ರೂ. ಅನುದಾನದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣದ ಜಾಗೆಯನ್ನು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಗದಗ ಜಿಲ್ಲೆಯ ಆಡಳಿತ್ಮಾಕ ನ್ಯಾಯಮೂರ್ತಿ ವಿ.ಶ್ರೀಶಾನಂದ್ ರವಿವಾರ ಬೆಳಿಗ್ಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಅವರು ಮಾತನಾಡಿ, ನ್ಯಾಯಾಲಕ್ಕೆ ಇದುವರೆಗೂ ಸ್ವಂತ ಕಟ್ಟಡವಿರಲಿಲ್ಲ. ನ್ಯಾಯಾಲಯ ಕಲಾಪಗಳು ಈವರೆಗೆ ರೋಣ ರಸ್ತೆಯ ಬಳಿ ಕಟ್ಟದವೊಂದರ ಮೇಲ್ಭಾಗದಲ್ಲಿ ನಡೆಯುತ್ತಿದೆ. ಇದನ್ನು ಮನಗಂಡ ಸರ್ಕಾರ ನೂತನ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲು 9.80 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದರು.

ನೂತನ ನ್ಯಾಯಾಲಯ ಕಟ್ಟಡವು ನ್ಯಾಯಾಧೀಶರ ಕೊಠಡಿ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ. ಶಾಲೆ, ಆಸ್ಪತ್ರೆ, ಕೋರ್ಟ್ ನಿರ್ಮಾಣ ಕಾರ್ಯದಲ್ಲಿ ಗುತ್ತಿಗೆದಾರರು ಶ್ರದ್ಧೆಯಿಂದ ಗುಣಮಮಟ್ಟದ ಕಾಮಗಾರಿ ನಡೆಸಲು ಮುಂದಾಗಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಸವರಾಜ, ರೋಣ ಕೋರ್ಟ್ ನ್ಯಾಯಾಧೀಶರಾದ ಭರತಕುಮಾರ ಕರಗುದರಿ, ವಕೀಲರಾದ ಬಿ.ಎಂ. ಸಜ್ಜನ, ಆರ್.ಎಂ. ರಾಯಬಾಗಿ, ಬಿ.ಎಸ್. ಹಿಡ್ಕಿಮಠ, ಬಾಲು ರಾಠೋಡ, ಎಂ.ಎಚ್. ಕೋಲಕಾರ, ತಿಮ್ಮನಗೌಡರ, ಎಂ.ಎಸ್. ಪಡಪದ, ರಾಘು ಭಂಜಂತ್ರಿ, ಶ್ರೀಕಾಂತ ಅವದೂತ, ಕೆ.ಎಂ. ನಂದನಜವಳೇಕರ, ಪಿಎಸ್‌ಐ ಸೋಮನಗೌಡ್ರ ಗೌಡರ, ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here