ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಗದಗ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಜಿಲ್ಲಾ ಪಂಚಾಯತ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗದಗ ಉತ್ಸವ-2024ರಲ್ಲಿ ಮಕ್ಕಳ ಪ್ಯಾಷನ್ ಶೋ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ನಗರದ ಕೆ.ಎಲ್.ಇ. ಪಾರ್ಶ್ವನಾಥ, ಮಹಾವೀರ ಜೈನ್, ಅಕ್ಷರ ಬಚಪನ್, ಸನ್‌ರೈಸ್ ಹಾಗೂ ಇನ್ನಿತರ ಶಾಲೆಯ ಮಕ್ಕಳು ಭಾಗವಹಿಸಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ಸ್ಪರ್ಧೆಗಳ ನಿರ್ಣಾಯಕರಾಗಿ ಆಯೇಶಾ ಲುಂಕಡ, ಸ್ನೇಹಾ ವಿ.ಹಿರೇಮಠ, ರೇಣುಕಾ ಹಬೀಬ ಆಗಮಿಸಿ, ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಮೊದಲನೇ ಸುತ್ತು ಟ್ರೆಡಿಶನಲ್ ರೌಂಡ್‌ನಲ್ಲಿ ಅಕ್ಷರ ಟೆಕ್ನೋ ಶಾಲೆಯ ಮನ್ವಿತಾ ರವಿ ಹಳ್ಳಿ ಪ್ರಥಮ, ದ್ವಿತೀಯ ಪಾರ್ಶ್ವನಾಥ ಶಾಲೆಯ ಜೋಹಾ, ತೃತೀಯ ಬಹುಮಾನವನ್ನು 97ನೇ ಸಂಖ್ಯೆಯ ವಿದ್ಯಾರ್ಥಿನಿ ಪಡೆದರು. ವೆಸ್ಟರ್ನ್ ರೌಂಡ್‌ನಲ್ಲಿ ಪ್ರಥಮ ಬಹುಮಾನ ಕೆ.ಎಲ್.ಇ. ಶಾಲೆಯ ನೇಹಾ, ದ್ವಿತೀಯ ಬಹುಮಾನ ಬಚಪನ್ ಶಾಲೆಯ ರಮಶಾ, ತೃತೀಯ ಬಹುಮಾನ ಕೆ.ಎಲ್.ಇ. ಶಾಲೆಯ ಅನ್ವಿತಾ ಪಡೆದರು.
ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಸಿ.ಡಿ.ಓ. ಜೈನ್ ಶಾಲೆಯ ಆದಿತ್ಯಾ ರಾ. ಪಾಟೀಲ, ದ್ವಿತೀಯ ಬಹುಮಾನ ಸನ್‌ರೈಸ್ ಶಾಲೆಯ ಆರೂಷ ಎಸ್.ಯಲ್ಲಪ್ಪಗೌಡ್ರ, ತೃತೀಯ ಬಹುಮಾನ ಸಾಯಿ ಆರನಾ ಪಡೆದರು.
ಈ ಸಂದರ್ಭದದಲ್ಲಿ ಉತ್ಸವ ಸಮಿತಿಯ ಚೇರಮನ್ ಚಂದ್ರಣ್ಣ ಬಾಳಿಹಳ್ಳಿಮಠ, ಅಧ್ಯಕ್ಷರಾದ ಈಶಣ್ಣ ಮುನವಳ್ಳಿ, ಗೌರವ ಕಾರ್ಯದರ್ಶಿ ಪ್ರಕಾಶ ಉಗಲಾಟದ, ಕೋಶಾಧ್ಯಕ್ಷರಾದ ಅಶೋಕ ಪಾಟೀಲ, ಸಾಂಸ್ಕೃತಿಕ ಕಾರ್ಯಕ್ರಮ ಚೇರಮನ್ ವಿಜಯಕುಮಾರ ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷರಾದ ಸುವರ್ಣಾ ಮದರಿಮಠ, ಗೌರವ ಕಾರ್ಯದರ್ಶಿ ಜ್ಯೋತಿ ಭರಮಗೌಡ್ರ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.