ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಉಸುಗಿನಗಟ್ಟಿ ಓಣಿಯ ಶ್ರೀ ಗಂಜಿ ಬಸವೇಶ್ವರರ 62ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಅಡ್ನೂರ-ರಾಜೂರು ಬ್ರಹನ್ಮಠದ ಶ್ರೀ ಷ.ಬ್ರ. ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀನಂದಿ ಧ್ವಜಾರೋಹಣ ನೆರವೇರಿತು.
ಉಸುಗಿನಗಟ್ಟಿಯ ನಿವಾಸಿಗಳು, ಗುರು-ಹಿರಿಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



