ವಿಜಯಸಾಕ್ಷಿ ಸುದ್ದಿ, ಗದಗ : ಡಾ. ವಿ.ಬಿ. ಹಿರೇಮಠ ಮೊಮೋರಿಯಲ್ ಪ್ರತಿಷ್ಠಾನ ಗದಗ ಇವರ ಆಶ್ರಯದಲ್ಲಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 110ನೇ ಜಯಂತ್ಯುತ್ಸವ ಸಮಾರಂಭದಲ್ಲಿ ರಾಜ್ಯಮಟ್ಟದ `ಗುರು ಪುಟ್ಟರಾಜರ ಗಾಯನಶ್ರೀ’ ಪ್ರಶಸ್ತಿಯನ್ನು ಗದುಗಿನ ಪದ್ಮಾ ಜೆ.ಕಬಾಡಿ ಅವರಿಗೆ ನೀಡಲಾಗುತ್ತಿದೆ.
Advertisement
ಕನ್ನಡ ನಾಡು-ನುಡಿ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಗಮನಿಸಿ, ಮಾ.3ರಂದು ನಡೆಯುವ ಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 110ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವ್ಹಿ.ವ್ಹಿ. ಹಿರೇಮಠ ತಿಳಿಸಿದ್ದಾರೆ.