ವಿಜಯಸಾಕ್ಷಿ ಸುದ್ದಿ, ಗದಗ : ಇನ್ನರ್ ವ್ಹೀಲ್ ಸಂಸ್ಥೆ ಗದಗ-ಬೆಟಗೇರಿಯ ಮಾಸಿಕ ಸಮಾನ್ಯ ಸಭೆಯು ರೋಟರಿ ಐ ಕೇರ್ ಸೆಂಟರ್‌ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ನಾಗರತ್ನ ಮಾರನಬಸರಿ ವಹಿಸಿದ್ದರು. ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಇನ್ನರ್ ವ್ಹೀಲ್ ಜಿಲ್ಲೆ 317ರ ಮಾಜಿ ಚೇರಮನ್ ಪ್ರೇಮಾ ಗುಳಗೌಡರ ಸಭೆಯನ್ನುದ್ದೇಶಿಸಿ ಮಾತನಾಡಿ, ಸಮಾಜಿಕ ಸೇವೆ ಹಾಗೂ ಶೈಕ್ಷಣಿಕ ಸೇವೆಗಳನ್ನು ನೀಡುವಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ತನ್ನದೇ ಆದ ಮಹತ್ತರ ಪಾತ್ರ ವಹಿಸಿದೆ ಎಂದರು.
ಖಜಾಂಚಿ ಪೂಜಾ ಭೂಮಾರ 2024-25ನೇ ಸಾಲಿನ ಆಯ-ವ್ಯಯದ ಮುಂಗಡ ಪತ್ರ ಮಂಡಿಸಿದರು. ಐ.ಎಸ್.ಓ ಪುಷ್ಪಾ ಭಂಡಾರಿ ವಿವಿಧ ಸ್ಪರ್ಧೆಗಳ ಮಾಹಿತಿ ನೀಡಿದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ ಹಿಂದಿನ ಸಭೆಯದ ವಿಷಯ ಹಾಗೂ ಸಭೆಯ ನಡಾವಳಿಗಳನ್ನು ತಿಳಿಸಿದರು.
ರಾಜೇಶ್ವರಿ ಬಳ್ಳಾರಿ, ಶ್ರೇಯಾ ಪವಾಡಶೆಟ್ಟರ, ಸುಶೀಲಾ ಬಾಗಮಾರ, ಕಸ್ತೂರಿ ಹಿರೇಗೌಡರ, ಶಾಂತಾ ಗೌಡರ, ಶಾಂತಾ ನಿಂಬಣ್ಣವರ, ನಿಕಟಪೂರ್ವ ಅಧ್ಯಕ್ಷೆ ರಜನಿ ಪಾಟೀಲ, ಶಾಂತಾ ಮುಂದಿನಮನಿ, ಸವಿತಾ ಧರ್ಮಾಯತ, ಮೀನಾಕ್ಷಿ ಕೊರವಣ್ಣವರ, ಸಾಗರಿಕಾ ಅಕ್ಕಿ, ಅಶ್ವಿನಿ ಜಗತಾಪ, ನೀಲಾಂಬಿಕಾ ಉಗಲಾಟ, ಸುವರ್ಣಾ ವಸ್ತçದ, ಸರೋಜಿನಿ ಆಲೂರ, ಮಂಜುಳಾ ಅಕ್ಕಿ, ಕಮಲಾ ಜಂಬಗಿ, ಅನ್ನಪೂರ್ಣ ವರವಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.