ಹೆಣ್ಣು ಮಕ್ಕಳೇ ಇವರ ಟಾರ್ಗೆಟ್: ಕೆಟ್ಟ ಟ್ರೋಲ್‌ ಬಗ್ಗೆ ನಿವಿ ಖಡಕ್‌ ಮಾತು!

0
Spread the love

ಪ್ರೀತಿಸಿ, ಮದುವೆಯಾಗಿದ್ದ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಅವರು ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಹೊಂದಾಣಿಕೆ ಸಮಸ್ಯೆ ಎಂದು ಈ ಜೋಡಿ ಡಿವೋರ್ಸ್‌ ಪಡೆದಿತ್ತು. ಈಗ ಇವರಿಬ್ಬರು ದಿಢೀರ್‌ ಸುದ್ದಿಗೋಷ್ಠಿ ಕರೆದು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

Advertisement

ಹೌದು, ಒಂದೇ ಸಿನಿಮಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಟಿಸಿದ್ದಾರೆ. ಇಂದು ‘ಮುದ್ದು ರಾಕ್ಷಸಿ’ ಸಿನಿಮಾದ ಕೊನೆ ದಿನ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ, ನಿವೇದಿತಾ ಗೌಡ ತಮಗಾದ ಕೆಟ್ಟ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ.

ಈ ಸಮಾಜನೇ ಹೀಗೆ ಸದಾ ಹೆಣ್ಣು ಮಕ್ಕಳನ್ನ ದೂಷಿಸುತ್ತಾರೆ. ಎಷ್ಟಾದ್ರೂ ಸೊಸೈಟಿ ಬದಲಾಗಲ್ಲ ಹುಡುಗಿಯರನ್ನೇ ಬ್ಲೇಮ್ ಮಾಡುತ್ತಾರೆ. ಮಾತನಾಡೋಕೆ ಅವಕಾಶ ಇದೆ ಅಂತ ಮಾಡ್ತೀರಾ ಮಾಡಿ ಪರವಾಗಿಲ್ಲ ಎಂದಿದ್ದಾರೆ. ನನಗೇನು ಬೇಜಾರಾಗಲ್ಲ, ನೋವು ಆಗಲ್ಲ, ನಾನು ಟ್ರೋಲ್ ಬಗ್ಗೆ ಕೇರ್ ಮಾಡಲ್ಲ. ಇನ್ನು ಟ್ರೋಲ್ ಮಾಡಿ ಸುಮ್ಮನೆ ನೋಡ್ತೀನಿ ಅಷ್ಟೇ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೋಲ್ಡ್ ಆಗಿ ನಿವೇದಿತಾ ಹೇಳಿದ್ದಾರೆ.

ಈ ವೇಳೆ, ಚಂದನ್ ಜೊತೆ ಮತ್ತೆ ಒಂದಾಗ್ತಾರಾ ಎಂಬುದರ ಬಗ್ಗೆ ಮಾತನಾಡಿ, ಡಿವೋರ್ಸ್ ಆಗಿ ಒಂದಾಗಿರೋ ಕಪಲ್ಸ್ ಅಲ್ಲಿ ಅಷ್ಟು ಪ್ರೀತಿ ಇತ್ತೇನೋ ಒಂದಾಗಿದ್ದಾರೆ. ನಮ್ಮಲ್ಲಿ ಆ ತರಹ ಅನ್ಯೋನ್ಯತೆ ಇರಲಿಲ್ಲ ಎಂದು ಮತ್ತೆ ನಾವು ಒಂದಾಗಲ್ಲ ಅಂತ ನೇರವಾಗಿ ನಿವೇದಿತಾ ಗೌಡ ಮಾತನಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here