ಗದಗ:- ನಾನು ಐದೇ ನಿಮಿಷದಲ್ಲಿ ಪ್ರಧಾನ ಮಂತ್ರಿಗಳಿಂದ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುತ್ತೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿಯಿದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಅವರೇ ತಮಿಳುನಾಡಿನ ಒಪ್ಪಿಗೆ ಪಡೆಯಿರಿ ಎನ್ನುವ ನೀವು..ಮಹದಾಯಿಗೆ ಒಪ್ಪಿಗೆ ಕೊಡಿಸಬಹುದಲ್ವಾ ಗೋವಾದಲ್ಲಿ ನಿಮ್ದೆ ಸರ್ಕಾರ ಇದೆ ತಾನೆ. ಹಾಗಿದ್ರೆ ನಮ್ಗೆ ಮಹದಾಯಿಗೆ ಒಪ್ಪಿಗೆ ಕೊಡ್ಸಿ ಎಂದು ಸವಾಲ್ ಹಾಕಿದರು. ಪ್ರಧಾನಿ ಮೋದಿ ಅವರನ್ನು ನೀವೇಕೆ ಒಪ್ಪಿಸ್ತೀರಿ, ಅವರ ಕನ್ಸಂಟ್ ಬೇಕಾ ನಿಮ್ಗೆ ಅಂತ ಗರಂ ಆದರು. ನೀವು ಆದೇಶ ಮಾಡ್ರಿ. ಎಲ್ಲಾದಕ್ಕೂ ಅವ್ರ ಒಪ್ಪಿಗೆ ತಗೋತೀರಾ. ಮಿತ್ರಪಕ್ಷಕ್ಕೆ ಒತ್ತಾಯಿಸಿ ಅಂತೀರಲ್ಲಾ.. ಡಿಎಂಕೆ ಒಪ್ಪಿಗೆ ತೆಗೆದುಕೊಂಡೇ ಎಲ್ಲಾ ಮಾಡ್ತೀರಾ. ನಿಮಗೆ ಆದೇಶ ಮಾಡಲು ಬರಲ್ವಾ ಅಂತ ಕಿಡಿಕಾರಿದರು.
ಅಂತರರಾಜ್ಯ ನೀರಿನ ವಿವಾದ ಕಾನೂನು ಪ್ರಕಾರ ಪಾಸ್ ಮಾಡಿ ಕೊಟ್ಟಿದ್ದೀವಿ. ಅದು ಯಾಕೇ ಕೊಟ್ಟಿದ್ದೀವಿ. ಒಪ್ಪಿಗೆ ತರಬೇಕು ಅಂತ. ಅದರಲ್ಲಿ ಪ್ರಸ್ತಾಪ ಇದೆಯಾ ಅಂತ ನೋಡಿ. ಗೋವಾದಲ್ಲಿ ನಿಮ್ದೆ ಸರ್ಕಾರ ಇದೆ. ಹಾಗಿದ್ರೆ ನಮ್ಗೆ ಮಹದಾಯಿಗೆ ಒಪ್ಪಿಗೆ ಕೊಡ್ಸಿ ಅಂತ ಸವಾಲ್ ಹಾಕಿದರು. ನಿಮಗೆ ಏನಾದರೂ ತೊಂದರೆ ಇದ್ರೆ. ಅವರದ್ದು ಒಪ್ಪಿಗೆ ತಗೊಂಡು ಬನ್ನಿ. ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಪತ್ರ ತೋರಿಸಿದ್ರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರಿಕಾ ಪರಿಷತ್ ಮಾಡಿದ್ರು. ಅಮಿತಾ ಬಂದಾಗ್ ಏನೇನಾಯ್ತು ಅನ್ನೋದು ಗೊತ್ತಿದೆ. ಅಲ್ಲಿ ಒಪ್ಪಿಗೆ ತಗೊಂಡು ಬರ್ತಾರಾ. ಅಗತ್ಯ ಇದೆಯಾ ಅಂತ ಕಿಡಿಕಾರಿದರು. ಪ್ರಧಾನಿ ಮೋದಿ ಅವ್ರಿಗೆ ಗೋವಾ ಒಪ್ಪಿಗೆ ತಗೊಂಡು ಬನ್ನಿ ಅಂತ ಹೇಳಲ್ಲಾ ನಾನು. ಕುಮಾರಸ್ವಾಮಿ ಅವ್ರೇ ತಗೊಂಡು ಬನ್ನಿ ಎನ್ನಲ್ಲ. ಅದು ಅವಶ್ಯಕತೆ ಇಲ್ಲ. ಅವಶ್ಯಕತೆ ಇಲ್ಲಾ ಅಂದ್ರೆ ಯಾಕೇ ಹೋಗ್ತೀರಾ ಎಂದು ಪ್ರಶ್ನಿಸಿದರು.
ಪ್ರಾಮಾಣಿಕವಾಗಿ ಜನಗಣತಿ ಸರ್ವೆ ನಡಿತಾಯಿದೆ:
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ನಾಗಮೋಹನ ದಾಸ್ ವರದಿ ಇನ್ನೇನು ತನ್ನ ಕೆಲಸ ಪೂರ್ಣ ಮಾಡಲು ಬಂದಿದೆ. ಅವರೇ ಹೇಳಿದ ಹಾಗೇ 10 ಲಕ್ಷ ಜನ ಇನ್ನೂ ಮಾಹಿತಿ ಕೊಟ್ಟಿಲ್ಲ. ಆ ಕುರಿತು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದಾರೆ.
ಇಷ್ಟಾದ ಮೇಲೆ ನೀವು ಸುದ್ದಿ ಸೃಷ್ಟಿ ಮಾಡುವಂತಹದ್ದು ಏನು ಇಲ್ಲ. ಉತ್ತಮವಾಗಿ, ವೈಜ್ಞಾನಿಕವಾಗಿ, ಪ್ರಮಾಣಿಕ ಎಕ್ಸಸೈಜ್ ನಡೆದಿದೆ. ಅದು ಯಶಸ್ವಿಯಾಗಲು ಬಂದಾಗ, ಅನವಶ್ಯಕ ಪ್ರಶ್ನೆ ಕೇಳೋದು ಆರೋಗ್ಯಕರ ಅಲ್ಲ. ಸಮರ್ಪಕವಾಗಿ ಅತ್ಯಂತ ಪ್ರಾಮಾಣಿಕವಾಗಿ ಸರ್ವೆ ನಡಿತಾಯಿದೆ ಎಂದರು.