Homecultureಪುರಾಣವನ್ನು ಪ್ರತಿಯೊಬ್ಬರೂ ಆಲಿಸಬೇಕು : ಶಿವಲೀಲಾ ಅಕ್ಕಿ

ಪುರಾಣವನ್ನು ಪ್ರತಿಯೊಬ್ಬರೂ ಆಲಿಸಬೇಕು : ಶಿವಲೀಲಾ ಅಕ್ಕಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ದೇವಿ ಪುರಾಣ ಆಲಿಸುವುದರಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ ಎಂದು ಶಿವಲೀಲಾ ಅಕ್ಕಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಜರುಗಿದ ದೇವಿ ಪುರಾಣ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆಲ್ಲುವ ವಿಧಾನಗಳನ್ನು ದೇವಿ ಪುರಾಣದಲ್ಲಿ ಅತ್ಯಂತ ಅರ್ಥಗರ್ಭಿತವಾಗಿ ವಿವರಿಸಲಾಗಿದೆ.

ಇಂತಹ ದೇವಿ ಪುರಾಣವನ್ನು ಪ್ರತಿಯೊಬ್ಬರೂ ಆಲಿಸಬೇಕು ಎಂದರು.

ಸಿದ್ದಣ್ಣಾ ಜವಳಿ ಪುರಾಣ ಪ್ರವಚನ ನೀಡಿದರು, ಶಿವಯ್ಯ ಮರಿದೇವರಮಠ ಪುರಾಣ ಪಠಣ ಮಾಡಿದರು, ತಬಲಾ ವೆಂಕಟೇಶ, ಸಂಗೀತ ಮೋಹನ ಮದ್ದಿನ ಇವರಿಂದ ಜರುಗಿತು.

ಗೌರಮ್ಮಾ ಬಡ್ನಿ, ಎಸ್.ಸಿ. ಬಡ್ನಿ, ವಿಜಯ ನೀಲಗುಂದ, ಬಸವರಾಜ ಹಾರೋಗೇರಿ, ಜಗದೀಶ ಬಟ್ಟೂರ, ಹರ್ಷಲತಾ ದೇಶಪಾಂಡೆ, ಶೋಭಾ ಪಾಟೀಲ್, ಕವಿತಾ ದೊಟಿಕಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕಿ ಶಾಂತಾ, ಅಕ್ಕಮ್ಮಾ ನೀಲಗುಂದ, ಯೋಗ ಶಿಕ್ಷಕ ಪ್ರಕಾಶ ಮದ್ದಿನ ಇದ್ದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!