ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಪೂಜಾ ವಿನಾಯಕ ಗ್ರಾಮಪುರೋಹಿತ ಅವರು ಎಂ.ಎ ಕನ್ನಡ ವಿಭಾಗದಲ್ಲಿ ಸುವರ್ಣ ಪದಕಕ್ಕೆ ಭಾಜನರಾಗಿದ್ದಾರೆ.
Advertisement
ಶೈಕ್ಷಣಿಕ ವರ್ಷದ ಎಂ.ಎ ಕನ್ನಡ ವಿಷಯದಲ್ಲಿ ಸೆ. 24ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಪೀಠವು ಕೊಡಮಾಡುವ ಧಾರವಾಡ ಮುರುಘಾಮಠದ ಮಹಾಂತ ಸ್ವಾಮೀಜಿ ಸುವರ್ಣ ಪದಕ ನೀಡಿ ಗೌರವಿಸಲಿದ್ದಾರೆ ಎಂದು ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿನಂದನೆ:ಸ್ನಾತಕೋತ್ತರ ವಿಭಾಗದಲ್ಲಿ ಸುವರ್ಣ ಪದಕ ಪಡೆದಿರುವ ಪೂಜಾ ಗ್ರಾಮಪುರೋಹಿತ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ ಹಾರ್ನಹಳ್ಳಿ, ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಷಿ, ಡಾ. ಜಿ.ಕೆ. ಕಾಳೆ ಮುಂತಾದವರು ಅಭಿನಂದಿಸಿದ್ದಾರೆ.