ಬಂಗಾರ ಎಂದಾಗ ಹೆಂಗಸರ ಸಂಭ್ರಮ ಹೇಳುವುದೇ ಬೇಡ, ವರ್ಷಕ್ಕೊಮ್ಮೆಯಾದರೂ ಏನಾದರೂ ಚಿನ್ನ ಖರೀದಿಸ ಲೇಬೇಕೆಂದು ನಿರ್ಧಾರ ಮಾಡಿರುತ್ತಾರೆ. ಚಿನ್ನದ ಮೇಲೆ ವ್ಯಾಮೋಹಕ್ಕಿಂತ ಒಂದು ರೀತಿಯ ಅಟ್ಯಾಚ್‌ಮೆಂಟ್ ಹೆಚ್ಚು ಎಂಬಂತೆ ಚಿನ್ನ ಜನರ ಜೀವನದಲ್ಲಿ ಮಹತ್ವ, ಸ್ಥಾನ ಪಡೆದುಕೊಂಡಿದೆ.
ಬಂಗಾರ ಒಂದೆಡೆ ವೈಭವ, ಸಂಭ್ರಮವನ್ನು ಎತ್ತಿ ಹಿಡಿದರೆ ಇನ್ನೊಂದೆಡೆ ಕಷ್ಟಕಾಲದ ಆಪತ್ಬಾಂಧವ ಎಂದೆನಿಸಿಕೊಳ್ಳುತ್ತದೆ. ಎಷ್ಟೋ ಆಭರಣಗಳನ್ನು ಕಷ್ಟದ ಸಮಯದಲ್ಲಿ ಮಾರಿ ಸಂಕಟದಿಂದ ಪಾರಾದವರಿದ್ದಾರೆ ಹಾಗಾಗಿ ಚಿನ್ನಕ್ಕೆ ಎಂದಿಗೂ ಪ್ರಾಮುಖ್ಯತೆ ಬೆಲೆ ಇದ್ದೇ ಇರುತ್ತದೆ.
ಆಭರಣ ಚಿನ್ನದ ಬೆಲೆಯಲ್ಲಿ ಗ್ರಾಮ್ಗೆ 15 ರೂ ಹೆಚ್ಚಿಕೆಯಾಗಿ 11,300 ರೂ ಸಮೀಪಕ್ಕೆ ಹೋಗಿದೆ. ಬೆಳ್ಳಿ ಬೆಲೆ 154 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,12,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,23,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,12,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 15,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,800 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 3ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,317 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,290 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,238 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 154 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,317 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,290 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 154 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,290 ರೂ
- ಚೆನ್ನೈ: 11,350 ರೂ
- ಮುಂಬೈ: 11,290 ರೂ
- ದೆಹಲಿ: 11,305 ರೂ
- ಕೋಲ್ಕತಾ: 11,290 ರೂ
- ಕೇರಳ: 11,290 ರೂ
- ಅಹ್ಮದಾಬಾದ್: 11,295 ರೂ
- ಜೈಪುರ್: 11,305 ರೂ
- ಲಕ್ನೋ: 11,305 ರೂ
- ಭುವನೇಶ್ವರ್: 11,290 ರೂ



