2025ರ ಆರಂಭದಿಂದಲೇ ಚಿನ್ನ ಮತ್ತು ಬೆಳ್ಳಿ ಬೆಲೆಗಳು ರಾಕೆಟ್‌ನಂತೆ ಏರಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದೀಗ ಡಬಲ್ ಆಗಿದೆ. ಬಂಗಾರ ಪ್ರಿಯರಿಗೆ ದೊಡ್ಡ ಹೊಡೆತ ಬಿದ್ದಿದೆ. ಮದುವೆ ಮುಂಜಿ ಹಬ್ಬಕ್ಕೆ ಚಿನ್ನ ಬೆಳ್ಳಿ ಖರೀದಿ ಮಾಡಬೇಕು ಅಂದುಕೊಂಡವರ ಕನಸಿಗೆ ಎಳ್ಳು ನೀರು ಬಿಟ್ಟಂತಾಗಿದೆ. ಇದು ಅನೇಕರಿಗೆ ಆಭರಣ ಖರೀದಿಯನ್ನು ಕಷ್ಟಕರಗೊಳಿಸಿದೆ.
ಇನ್ನೂ ಚಿನ್ನದ ಬೆಲೆ ಭಾರಿ ಜಿಗಿತ ಕಂಡಿದ್ದು, ಮತ್ತೊಮ್ಮೆ ಗರಿಷ್ಠ ಬೆಲೆಯ ಜಿಗಿತ ಕಂಡಿದೆ. ಹೌದು ಚಿನ್ನದ ಬೆಲೆ ಗ್ರಾಮ್ಗೆ 100 ರೂ ಏರಿದರೆ, ಬೆಳ್ಳಿ ಬೆಲೆ 5 ರೂ ಜಿಗಿದಿದೆ. ಆಭರಣ ಚಿನ್ನದ ಬೆಲೆ 12,300 ರೂನಿಂದ 12,400 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,528 ರೂ ಮುಟ್ಟಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 214 ರೂನಿಂದ 219 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 231 ರೂ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,24,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,35,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 21,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,24,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 21,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,100 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 22ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,528 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,400 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,146 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 219 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,528 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,400 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 219 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,400 ರೂ
- ಚೆನ್ನೈ: 12,480 ರೂ
- ಮುಂಬೈ: 12,400 ರೂ
- ದೆಹಲಿ: 12,415 ರೂ
- ಕೋಲ್ಕತಾ: 12,400 ರೂ
- ಕೇರಳ: 12,400 ರೂ
- ಅಹ್ಮದಾಬಾದ್: 12,405 ರೂ
- ಜೈಪುರ್: 12,415 ರೂ
- ಲಕ್ನೋ: 12,415 ರೂ
- ಭುವನೇಶ್ವರ್: 12,400 ರೂ



