ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೆಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಬಿಟ್ಟು ಹೋಗಿದ್ದ ಗೋಲ್ಡ್ ಸುರೇಶ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು ವಿಷಯ ಕೇಳಿ ಅಭಿಮಾನಿಗಳು ಕಂಗಾಲಾಗಿದ್ದಾರೆ.
ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಉತ್ತಮ ಫರ್ಫಾರ್ಮೆನ್ಸ್ ಮಾಡುತ್ತಿದ್ದ ಗೋಲ್ಡ್ ಸುರೇಶ್ ಏಕಾಏಕಿ ದೊಡ್ಮನೆಯಿಂದ ಹೊರ ಬಂದಿದ್ದರು. ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಸುರೇಶ್ ಅವರ ಅಗತ್ಯವಿದೆ ಎಂದು ಅನೌನ್ಸ್ಮೆಂಟ್ ಮಾಡಿದ್ದರು. ಆಗ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಹೊರ ಬಂದಿದ್ದರು.
ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರ ಬಂದು ಹಲವು ದಿನಗಳೇ ಆಗಿದೆ. ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಟಾಸ್ಕ್ ವೇಳೆ ಕಾಲಿಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದರು ಗೋಲ್ಡ್ ಸುರೇಶ್. ಹೀಗಾಗಿ ಇಂದು ಅವರ ಕಾಲಿಗೆ ಆಪರೇಷನ್ ಇದೆ. ಅದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.