Today Gold Price: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ-ಬೆಳ್ಳಿ ಬೆಲೆ ಇಳಿಕೆ

0
Spread the love

ಬಂಗಾರವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರು ಕೊಳ್ಳಲು ಬಯಸುತ್ತಾರೆ, ತಲೆದೋರುವ ಕಷ್ಟದ ಸಂದರ್ಭಗಳಲ್ಲಿ ಚಿನ್ನವು ಆಪದ್ಭಾಂಧವನಂತೆ ಸಹಾಯಕ್ಕೆ ಬರುತ್ತದೆ ಎಂದು ಇದರ ಖರೀದಿ ಕೂಡ ಹೆಚ್ಚು. ದೀಪಾವಳಿ ಹಬ್ಬದ ಸಂದರ್ಧದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಇಂದಿನ ಗೋಲ್ಡ್ ರೇಟ್ ಈ ಸುದ್ದಿಯಲ್ಲಿದೆ.

Advertisement

ಅಕ್ಟೋಬರ್ 22 ಬುಧವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕ 12,720 ರೂಪಾಯಿ ಇದೆ. ಮಂಗಳವಾರದಿಂದ ಬುಧವಾರಕ್ಕೆ 338 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,27,200 ರೂಪಾಯಿ ಇದ್ದು ಇಂದು 3,380 ರೂ ಕುಸಿದಿದೆ.

22 ಕ್ಯಾರೆಟ್ 1 ಗ್ರಾಂ ಬೆಲೆ 11,660 ರೂಪಾಯಿ ಇದ್ದು, 10 ಗ್ರಾಂ ಬೆಲೆ 1,16,600 ರೂಪಾಯಿ ಇದೆ. 1 ಗ್ರಾಂ ನಲ್ಲಿ 310 ರೂಪಾಯಿ ಹಾಗೂ 10 ಗ್ರಾಂ3100 ರೂ ಇಳಿದಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,720 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,27,200 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ. ಬೆಳ್ಳಿ ಬೆಲೆ ಇಂದು 2 ರೂ ಇಳಿಕೆ ಆಗಿ, 1 ಗ್ರಾಂ ಬೆಲೆ 162 ರೂ ಇದ್ದು, ಕೆಜಿಗೆ 1,62,000 ರೂ ಇದೆ.


Spread the love

LEAVE A REPLY

Please enter your comment!
Please enter your name here