ಕಿಚ್ಚನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮತ್ತೆ ಆ ಜೋಡಿ ಒಂದಾಗ್ತಿದೆ. ಯಾರು ಅಂತೀರಾ ಈ ಸ್ಟೋರಿ ನೋಡಿ.. ಸೆಪ್ಟೆಂಬರ್ 2ರಂದು ನಟ ಕಿಚ್ಚ ಸುದೀಪ್ ಹುಟ್ಟುಹಬ್ಬ ಹಿನ್ನೆಲೆ ಸುದೀಪ್ ನಟನೆಯ ಮುಂದಿನ ಸಿನಿಮಾಗಳ ಅಪ್ ಡೇಟ್ ಸಿಗಲಿದೆ. ಜೊತೆಗೆ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾದ ಬಗ್ಗೆ ಮಾಹಿತಿ ದೊರೆಯಲಿದೆ. ಈ ಮಧ್ಯೆ ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಸುದೀಪ್ ಮತ್ತೆ ಸಿನಿಮಾ ಮಾಡುವ ಸುದ್ದಿ ಇದ್ದು ಈ ಬಗ್ಗೆ ಸೆ.2ರಂದು ಬಿಗ್ ಅಪ್ ಡೇಟ್ ಸಿಗಲಿದೆ.
ಅನೂಪ್ ಮತ್ತು ಸುದೀಪ್ ಈಗಾಗಲೇ ಜೊತೆಯಾಗಿ ‘ವಿಕ್ರಾಂತ್ ರೋಣ’ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಹೊಸ ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗ್ತಿದ್ದಾರೆ. ಸುದೀಪ್ ಜೊತೆ ಅನೂಪ್ ಚೆಂದದ ಫೋಟೋಶೂಟ್ ಮಾಡಿಸಿ ಸೆ.2ರಂದು ಬೆಳಗ್ಗೆ 10 ಗಂಟೆಗೆ ಸಿನಿಮಾ ಕುರಿತು ಮಾಹಿತಿ ಸಿಗಲಿದೆ ಎಂಬುದನ್ನು ಅಧಿಕೃತವಾಗಿ ತಿಳಿಸಿದ್ದಾರೆ. ವಿ ಆರ್ ಬ್ಯಾಕ್ ಎಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ಮಾಹಿತಿ ನೀಡಿದ್ದಾರೆ.
ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ಸುದೀಪ್ ಮ್ಯಾಕ್ಸ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಅಭಿಮಾನಿಗಳು ಸಿನಿಮಾಗಾಗಿ ಕಾದು ಕೂತಿದ್ದಾರೆ. ಈ ಮಧ್ಯೆ ಹೊಸ ಪ್ರಾಜೆಕ್ಟ್ ಕುರಿತು ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.