ಮೇಘಾ ಶೆಟ್ಟಿ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಮತ್ತೆ ಕಿರುತೆರೆಗೆ ನಟಿ ಎಂಟ್ರಿ!

0
Spread the love

ಜೊತೆಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಮುದ್ದು ಸೊಸೆ’ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಅವರು ದರ್ಶನ ನೀಡುತ್ತಿದ್ದಾರೆ.

Advertisement

ಈ ಧಾರವಾಹಿಯಲ್ಲಿ ನಟನಾಗಿ ಬಿಗ್ ಬಾಸ್’ ಖ್ಯಾತಿಯ ತ್ರಿವಿಕ್ರಮ್ ಮತ್ತು ನಟಿಯಾಗಿ ಪ್ರತಿಮಾ ಹಾಗೂ ಅತಿಥಿ ಪಾತ್ರವನ್ನು ಮೇಘಾ ಶೆಟ್ಟಿ ನಿಭಾಯಿಸಿದ್ದಾರೆ. ಈ ಸೀರಿಯಲ್ ಅನ್ನು ಅವರೇ ಪ್ರಸ್ತುತಪಡಿಸುತ್ತಿದ್ದಾರೆ. ಈ ಸೀರಿಯಲ್ ನಿರ್ಮಾಣಕ್ಕೆ ಅವರು ಕೂಡ ಸಾಥ್ ನೀಡಿರೋದು ವಿಶೇಷವಾಗಿದೆ.

ಇನ್ನೂ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ ಈಗ ಸ್ಯಾಂಡಲ್​ವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಸದ್ಯ ಇವರ ಕೈಯಲ್ಲಿ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’, ‘ಚೀತಾ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here