ಮುಂಬೈ: ಭಾರತದ ಜಿಡಿಪಿಗೆ ಹೆಚ್ಚುವರಿ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಮತ್ತೊಮ್ಮೆ ಕಡಿತಗೊಳಿಸಿದೆ. 25 ಬೇಸಿಸ್ ಪಾಯಿಂಟ್‌ಗಳ ಇಳಿಕೆಯಿಂದ ರೆಪೋ ದರ ಶೇ. 5.50ರಿಂದ ಶೇ. 5.25ಕ್ಕೆ ತಗ್ಗಿದೆ. ಹಣಕಾಸು ನೀತಿ ಸಮಿತಿ (MPC) ಸಭೆಯ ಬಳಿಕ ಈ ತೀರ್ಮಾನವನ್ನು ಘೋಷಿಸಿದ RBI ಗವರ್ನರ್ ಸಂಜಯ್ ಮಲ್ಹೋತ್ರಾ, ಆರು ಸದಸ್ಯರೂ ಸರ್ವಾನುಮತದಿಂದ ದರ ಇಳಿಕೆಗೆ ಒಪ್ಪಿಕೊಂಡಿದ್ದಾರೆ ಎಂದರು.
ರೆಪೋ ದರದ ಇಳಿಕೆಯಿಂದ ಬ್ಯಾಂಕುಗಳ ಸಾಲ ಬಡ್ಡಿದರವೂ ಕಡಿಮೆಯಾಗುವುದರಿಂದ, ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳನ್ನು ಕಡಿಮೆ ಬಡ್ಡಿದರದಲ್ಲಿ ಪಡೆಯುವ ಅವಕಾಶ ಸಿಗಲಿದೆ. ಇದರಿಂದ ಇಎಂಐಗಳ ಮೇಲೂ ನೇರ ಪರಿಣಾಮ ಬೀರುವ ನಿರೀಕ್ಷೆಯಿದೆ.
ಆಟೋಮೊಬೈಲ್ ಹಾಗೂ ಕಾರ್ಪೊರೇಟ್ ಕ್ಷೇತ್ರದಲ್ಲೂ ಮರುಪಾವತಿ ಕಂತುಗಳ ಮೇಲೆ ಸಡಿಲಿಕೆ ಸಿಗಬಹುದು. ತಜ್ಞರು ರೆಪೋ ದರದಲ್ಲಿ ಶೇ. 0.25ರಷ್ಟು ಇಳಿಕೆಯಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು. ಫೆಬ್ರವರಿಯಿಂದ RBI ಒಟ್ಟು 125 ಬೇಸಿಸ್ ಪಾಯಿಂಟ್‌ಗಳಷ್ಟು ರಿಪೋ ದರ ಕಡಿತಗೊಳಿಸಿದ್ದು, ಫೆಬ್ರವರಿಯಲ್ಲಿ 25 ಬೇಸಿಸ್ ಪಾಯಿಂಟ್ ಮತ್ತು ಏಪ್ರಿಲ್‌ನಲ್ಲಿ ಇನ್ನೂ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತ ಮಾಡಲಾಗಿತ್ತು.
ಪ್ರಸ್ತುತ ಇಎಂಐ- 24,618 ರೂ.
8.25% ದರ ಕಡಿತದ ಬಳಿಕ ಇಎಂಐ – 24,254 ರೂ.
ಪ್ರಸ್ತುತ ಬಡ್ಡಿ- 19,31,328 ರೂ.
8.25% ದರ ಕಡಿತ ನಂತರ ಬಡ್ಡಿ – 18,65,632 ರೂ.
ಉಳಿತಾಯ – 65,696 ರೂ.



