HomeGadag Newsಕ್ರೀಡಾ ತರಬೇತಿಗಾಗಿ ಉತ್ತಮ ಅವಕಾಶ

ಕ್ರೀಡಾ ತರಬೇತಿಗಾಗಿ ಉತ್ತಮ ಅವಕಾಶ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 10ರಿಂದ 18 ವರ್ಷದೊಳಗಿನವರಿಗಾಗಿ ಬೇಸಿಗೆ ತರಬೇತಿ ಶಿಬಿರವನ್ನು ಎಪ್ರಿಲ್ 5ರಿಂದ ಮೇ 31ರವರೆಗೆ ಆಯೋಜಿಸಲಾಗಿದೆ.

ಕ್ರೀಡೆಗಳು: ಈಜು, ಬ್ಯಾಡ್ಮಿಂಟನ್, ಫುಟ್‌ಬಾಲ್, ಸ್ಕೇಟಿಂಗ್, ಜಿಮ್, ಕ್ರಿಕೆಟ್, ಹಾಕಿ, ಸೈಕ್ಲಿಂಗ್, ಕುಸ್ತಿ,

ಈಜು: ಬೆಳಿಗ್ಗೆ 8ರಿಂದ 10ರವರೆಗೆ, ಸಂಜೆ 4ರಿಂದ 6ರ ವರೆಗೆ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಈಜುಕೊಳ ಮತ್ತು ಕಳಸಾಪುರ ರಸ್ತೆಯ ನಂದೀಶ್ವರ ನಗರ ಈಜುಕೊಳದಲ್ಲಿ ನಡೆಯಲಿದೆ. ಮಾಹಿತಿಗಾಗಿ ಶಿವಾನಂದ ಈಜು (7338689385) ಇವರನ್ನು ಸಂಪರ್ಕಿಸಬಹುದಾಗಿದೆ.

ಬ್ಯಾಡ್ಮಿಂಟನ್: ಬೆಳಿಗ್ಗೆ 6ರಿಂದ 10ರವರೆಗೆ, ಸಂಜೆ 4ರಿಂದ 7ರವರೆಗೆ ನಂದೀಶ್ವರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ, ತರಬೇತುದಾರರಾದ ಹನೀಫ್ (7892181797), ಗಜೇಂದ್ರಗಡ ಭಗತಸಿಂಗ್ ಕ್ರಿಡಾಂಗಣದಲ್ಲಿ ತರಬೇತುದಾರರಾದ ಅರುಣ ವನ್ನಾಲ (9743670431), ರೋಣ ದ್ರೋಣಾಚಾರ್ಯ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತುದಾರರಾದ ಬಸವರಾಜ ಹೊಸಳ್ಳಿ (8970838603) ಮಾರ್ಗದರ್ಶನದಲ್ಲಿ ನಡೆಯಲಿದೆ.

ಫುಟ್‌ಬಾಲ್: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6ರಿಂದ 9ರವರೆಗೆ, ಸಂಜೆ 4ರಿಂದ 7ರವರೆಗೆ ತರಬೇತುದಾರರಾದ ಶಶಿಕುಮಾರ ಮುಂಡರಗಿ, ಶ್ಯಾಮ ಮತ್ತು ರಾಘವೇಂದ್ರ ಮುಂಡರಗಿ ನೇತೃತ್ವದಲ್ಲಿ (7795012672, 9886796360, 8123350919) ನಡೆಯಲಿದೆ.

ಸ್ಕೇಟಿಂಗ್: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6ರಿಂದ 8ರವರೆಗೆ, ಸಂಜೆ 5.30ರಿಂದ 7ರವರೆಗೆ ನಡೆಯಲಿದ್ದು, ತರಬೇತುದಾರರಾದ ಮಂಜುನಾಥ ಕುರಿ (9980322548) ಇವರನ್ನು ಸಂಪರ್ಕಿಸಬೇಕು.

ಜಿಮ್: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಬೆಳಿಗ್ಗೆ 6ರಿಂದ 9ರವರೆಗೆ, ಸಂಜೆ 5ರಿಂದ 7ರವರೆಗೆ ತರಬೇತುದಾರರಾದ ಸಂತೋಷ ಹೊಸಳ್ಳಿ (7676675947) ಮಾರ್ಗದರ್ಶನದಲ್ಲಿ ನಡೆಯಲಿದೆ.

ಕ್ರಿಕೆಟ್: ಗದುಗಿನ ಕ್ರಿಕೆಟ್ ಅಂಕಣ, ಹೊಸ ಕೋರ್ಟ್ ಹತ್ತಿರ ಬೆಳಿಗ್ಗೆ 6ರಿಂದ 8ರವರೆಗೆ, ಸಂಜೆ 5ರಿಂದ 7ರವರೆಗೆ ನಡೆಯಲಿದ್ದು, ಮಲ್ಲಿಕಾರ್ಜನ್ (9886466390), ವೀರಣ್ಣ ಜಾನೋಪಂತರ್ (9743459707), ಅಸ್ಲಮ್ ಮುಧೋಳ (9739567030) ಇವರನ್ನು ಸಂಪರ್ಕಿಸಬಹುದು.

ಹಾಕಿ: ಬೆಟಗೇರಿಯ ಗಾಂಧಿನಗರ ಮಹಾತ್ಮ ಗಾಂಧಿ ಹಾಕಿ ಕ್ರಿಡಾಂಗಣದಲ್ಲಿ ಬೆಳಿಗ್ಗೆ 7ರಿಂದ 9ರವರೆಗೆ, ಸಂಜೆ 5ರಿಂದ 7ರವರೆಗೆ ತರಬೇತುದಾರ ಮಂಜುನಾಥ ಬಾಗಡೆ (9036533909) ಮಾರ್ಗದರ್ಶನದಲ್ಲಿ ನಡೆಯಲಿದೆ.

ಸೈಕ್ಲಿಂಗ್: ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7ರಿಂದ 9ರವರೆಗೆ, ಸಂಜೆ 5ರಿಂದ 7ರವರೆಗೆ ತರಬೇತುದಾರರಾದ ವಿದ್ಯಾ ಕುಲಕರ್ಣಿ (8951936636) ನೇತೃತ್ವದಲ್ಲಿ ನಡೆಯಲಿದೆ.

ಕುಸ್ತಿ: ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6ರಿಂದ 8ರವರೆಗೆ, ಸಂಜೆ 5ರಿಂದ 7ರವರೆಗೆ ತರಬೇತುದಾರ ವಿನಾಯಕ ಯಂಕAಚಿ (90119717032) ಮಾರ್ಗದರ್ಶನದಲ್ಲಿ ನಡೆಯಲಿದೆ.

ಪ್ರವೇಶಾತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೆ.ಎಚ್. ಪಾಟೀಲ್ ಜಿಲ್ಲಾ ಕ್ರಿಡಾಂಗಣ, ಗದಗ-ದೂರವಾಣಿ ಸಂಖ್ಯೆ-08372-238345 ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!