HomeEducationಜ.ತೋಂಟದಾರ್ಯ ಶಾಲೆಗೆ ಉತ್ತಮ ಫಲಿತಾಂಶ

ಜ.ತೋಂಟದಾರ್ಯ ಶಾಲೆಗೆ ಉತ್ತಮ ಫಲಿತಾಂಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜಗದ್ಗುರು ತೋಂಟದಾರ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.

ಆಂಗ್ಲ ಮಾಧ್ಯಮ ವಿಭಾಗದಲ್ಲಿ: ಸಂಜನಾ ಪಾಟೀಲ 625ಕ್ಕೆ 571 ಅಂಕ ಪಡೆದು ಶೇ.91.36 ಫಲಿತಾಂಶದೊಂದಿಗೆ ಶಾಲೆಗೆ ಪ್ರಥಮ, ನಿದರ್ಶನ ಬಗಾಡೆ 563 ಅಂಕ ಪಡೆದು ಶೇ.90.08 ಫಲಿತಾಂಶದೊಂದಿಗೆ ದ್ವಿತೀಯ, ಮುಸ್ತಫಾ ಬೆಳ್ಳಿಕೊಪ್ಪ 557 ಅಂಕಗಳೊಂದಿಗೆ ಶೇ.89.12 ಫಲಿತಾಂಶದೊಂದಿಗೆ ತೃತೀಯ, ಅಂಕಿತಾ ಬೆನಹಾಳ 529 (ಶೇ84.64) ಅಂಕ, ಸಹನಾ ಸಂಬರಗಿ 517 (ಶೇ.82.72) ಅಂಕ ಪಡೆದು ಶಾಲೆಗೆ 5ನೇ ಸ್ಥಾನ ಪಡೆದಿದ್ದಾರೆ.

ಕನ್ನಡ ಮಾಧ್ಯಮ ವಿಭಾಗದಲ್ಲಿ: ಗಾಯತ್ರಿ ಕಾಗಿ 566 (90.56) ಶಾಲೆಗೆ ಪ್ರಥಮ ಸ್ಥಾನ, ಲಕ್ಷ್ಮಿ ಶಿಂಪಗೇರ 543 (86.88) ದ್ವಿತೀಯ, ಅಜಮಾಯಿನ್ ನಾಗನೂರ 531 (84.96) ತೃತೀಯ, ವೈಷ್ಣವಿ ಶಿಂಧೆ 523 (83.68) ಶಾಲೆಗೆ ನಾಲ್ಕನೇ ಸ್ಥಾನ, ಭೂಮಿಕಾ ಪಿಸೆ 505 (80.08) ಶಾಲೆಗೆ ಐದನೇ ಸ್ಥಾನ ಪಡೆದಿದ್ದಾರೆ.

tontadarya

ಸಾಧಕ ವಿದ್ಯಾರ್ಥಿಗಳಿಗೆ ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಚೇರಮನ್ ಶಿವಾನಂದ ಎಸ್.ಪಟ್ಟಣಶೆಟ್ಟರ, ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಶಿಕ್ಷಕರಾದ ಕೃಷ್ಣಾ ಗೌಡರ, ಮಧುಮತಿ ಬಂಡಿವಾಡ, ವಂದನಾ ಮಿಸಾಳ, ಸುರೇಖಾ ಕುಂಬಾರಗೇರಿಮಠ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img