ವಿಜಯಸಾಕ್ಷಿ ಸುದ್ದಿ, ಗದಗ: ಗ್ಯಾರಂಟಿ ಯೋಜನೆಗಳ ಸಂಪೂರ್ಣ, ಸಮರ್ಪಕ ನಿರ್ವಹಣೆಯೊಂದಿಗೆ ಪರಿಣಾಮಕಾರಿಯಾಗಿ ಗದಗ ತಾಲೂಕಿನಲ್ಲಿ ಜಾರಿಗೊಳಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲೂಕು ಸಮಿತಿಯ ಸದಸ್ಯರನ್ನು ತಾಲೂಕು ಮಟ್ಟದ ಜವಾಬ್ದಾರಿಯೊಂದಿಗೆ ಕೆಳಕಂಡ ಗ್ರಾಮ ಪಂಚಾಯಿತಿಗಳಿಗೆ ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.
ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅವರಿಗೆ ರೋಣ ಮತ್ತು ನರಗುಂದ ವಿಧಾನಸಭಾ ಮತಕ್ಷೇತ್ರದ ಗ್ರಾಮ ಪಂಚಾಯತ್‌ಗಳ ಉಸ್ತುವಾರಿಯನ್ನು (ಮೊ.ಸಂ-9449446313), ಕೃಷ್ಣಗೌಡ ಎಚ್.ಪಾಟೀಲ ಅವರಿಗೆ ಹುಲಕೋಟಿ ಮತ್ತು ಕುರ್ತಕೋಟಿ ಗ್ರಾ.ಪಂ.ಗಳ ಉಸ್ತುವಾರಿಯನ್ನು (ಮೊ.ಸಂ-9742598038), ಶಂಭು ಎಸ್.ಕಾಳೆ ಅವರಿಗೆ ವಾರ್ಡ್ ನಂ. 1, 2, 16, 21 ಮತ್ತು 15 (ಮೊ.ಸಂ-9902108686), ಮೀನಾಕ್ಷಿ ಬೆನಕಣ್ಣವರ ಅವರಿಗೆ ವಾ.ಸಂ. 27, 28 ಮತ್ತು 29 (ಮೊ.ಸಂ-998038503), ಸಾವಿತ್ರಿ ಹೂಗಾರ ಅವರನ್ನು ವಾ.ಸಂ. 24, 31, 32 & 35 (ಮೊ.ಸಂ-6360212737) ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.



