HomeGadag Newsರಾಯಣ್ಣ, ಚನ್ನಮ್ಮ ಈ ನಾಡಿನ ಕಣ್ಣು : ವಿನೋದ ಅಸೂಟಿ

ರಾಯಣ್ಣ, ಚನ್ನಮ್ಮ ಈ ನಾಡಿನ ಕಣ್ಣು : ವಿನೋದ ಅಸೂಟಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಸಂಗೊಳ್ಳಿ ರಾಯಣ್ಣ, ಕಿತ್ತೂರರಾಣಿ ಚನ್ನಮ್ಮ, ಶ್ರೀರಾಮನ ಭವ್ಯ ಮೂರ್ತಿಯ ಅದ್ದೂರಿ ಮೆರವಣಿಗೆಯು ಶುಕ್ರವಾರ ಸಂಜೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಜರುಗಿತು.

ಮೆರವಣಿಗೆಗೆ ಚಾಲನೆ ನೀಡಿದ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜನರನ್ನು ಜಾಗೃತಗೊಳಿಸಿ ನಾಡಿಗಾಗಿ ಹೋರಾಡಿದ ಕೀರ್ತಿ ರಾಯಣ್ಣನವರಿಗೆ ಸಲ್ಲುತ್ತದೆ. ಕಿತ್ತೂರು ರಾಣಿ ಚನ್ನಮ್ಮಳ ಭಂಟನಾಗಿ ಸದಾ ದೇಶಭಕ್ತನಾಗಿ ನಾಡಿನ ಜನರನ್ನು ಸಂಘಟನೆ ಮಾಡಿ ಯುದ್ಧವನ್ನು ಮಾಡಿ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಶೂರನಾಗಿದ್ದ ಎಂದರು.

ಬಳಗದ ರಾಜ್ಯಾಧ್ಯಕ್ಷ ಸುರೇಶ ಗೋಕಾಕ ಮತ್ತು ಯುವ ಮುಖಂಡ ವಿನೋದ ಅಸೂಟಿ ಮಾತನಾಡಿ, ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಈ ನಾಡಿನ ಎರಡು ಕಣ್ಣುಗಳಿದ್ದಂತೆ. ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು ಎಂದರು.

ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ, ತಾಲೂಕಾಧ್ಯಕ್ಷ ಸುರೇಶ ಹಟ್ಟಿ, ಡಿಎಸ್‌ಎಸ್ ಸಂಚಾಲಕ ಸುರೇಶ ನಂದೆಣ್ಣನವರ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಸಮ್ಮೇದ ಗೋಗಿ, ಪ್ರಶಾಂತ ನಾಯಕ ನವೀನ ಬೆಳ್ಳಟ್ಟಿ, ನಿಂಗಪ್ಪ ಬನ್ನಿ, ಮಂಜುನಾಥ ಮುಳಗುಂದ ಲೆಂಕೆಪ್ಪ ಶೆರಸೂರಿ, ಪರಸಪ್ಪ ಇಮ್ಮಡಿ, ಮಹೇಶ ಮೇಟಿ, ಜಗದೀಶಗೌಡ ಪಾಟೀಲ್, ಮೈಲಾರಿ ಹೆಗ್ಗಣ್ಣನವರ, ಮಂಜು ಗದ್ದಿ, ಭರಮಪ್ಪ ಶೆರಸೂರಿ, ಅಭಯ ಜೈನ್, ಮಹಾಂತೇಶ ಗುದ್ನಾಳ, ನವೀನ ಶೇರಸೂರಿ, ಹರೀಶ ಶೇರಸೂರಿ, ನಿಂಗಪ್ಪ ಕುರಹಟ್ಟಿ, ಫಕ್ಕೀರೇಶ ಗದ್ದಿ, ಸಂತೋಷ ಬಾಲೆಹೊಸೂರ, ಸದಾನಂದ ಗದ್ದಿ ಮುಂತಾದವರಿದ್ದರು. ಮಂಜುನಾಥ ಕೊಕ್ಕರಗುಂದಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!