ಬೆಂಗಳೂರು: ಬಿಹಾರದಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೇ ನೀಡಿದ್ದಾರೆ.. ನಗರದಲ್ಲಿ ಮಾತನಾಡಿದ ಅವರು, ಮೋದಿ, ಬಿಜೆಪಿ ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದರು.
Advertisement
ಬಳಿಕ ದೆಹಲಿಯಲ್ಲಿ ಕೊಟ್ಟರು, ಇವಾಗ ಬಿಹಾರದಲ್ಲಿ ಕೊಟ್ಟಿದ್ದಾರೆ. ಬಿಜೆಪಿ ಹೇಳಿದಂತೆ ನಡೆಯುವುದಿಲ್ಲ ಎಂದಿದ್ದಾರೆ. ಕರ್ನಾಟಕ ಗ್ಯಾರಂಟಿ ವಿಚಾರದಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದಿದ್ದಾರೆ.
ಆರ್ಥಿಕ ದಿವಾಳಿ ಆಗುತ್ತೆ ಎಂದು ಪಿಎಂ ಮೋದಿ ಟೀಕೆ ಮಾಡಿದ್ದರು. ಆದರೆ ಎರಡು ವರ್ಷ ಯಾವ ರೀತಿ ಬಜೆಟ್ ಕೊಟ್ಟಿದ್ದಾರೆ ಸಿದ್ದರಾಮಯ್ಯ ಎಂಬುದು ಗೊತ್ತಿದೆ. ಆರ್ಥಿಕ ಶಿಸ್ತು ಕಾಪಾಡಲಾಗಿದೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಆಗ್ತಿದೆ. ಈಗ ಬಿಜೆಪಿಗೆ ಜ್ಞಾನೋದಯವಾಗಿದೆ. ಬಿಜೆಪಿಗರು ಕೊಡಲಿ ನಾವೇನು ಟೀಕೆ ಮಾಡಲ್ಲ. ನಾವು ಈ ಬಗ್ಗೆ ಕಾಮೆಂಟ್ ಮಾಡಲ್ಲ ಎಂದಿದ್ದಾರೆ.